ಕಡಿಮೆ ದರಕ್ಕೆ ಕೇಂದ್ರದ ಅಕ್ಕಿ; ಎಫ್​ಸಿಐಗೆ ಸೂಚಿಸಿದ ಆಹಾರ ಇಲಾಖೆ

Rice

ಹರೀಶ್ ಬೇಲೂರು ಬೆಂಗಳೂರು
ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಅಕ್ಕಿ ಮಾರಾಟ ಮಾಡಲು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮುಂದಾಗಿದೆ. ಭಾರತೀಯ ಆಹಾರ ನಿಗಮ (ಎಫ್​ಸಿಐ)ದ ಮೂಲಕ ಕೇಂದ್ರವು, ರಾಜ್ಯ ಸರ್ಕಾರಗಳಿಗೆ, ಸರ್ಕಾರದ ಅಧೀನದ ನಿಗಮಗಳಿಗೆ ಮತ್ತು ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಪ್ರತಿ ಕೆಜಿಗೆ 22 ರೂ.50 ಪೈಸೆಯಂತೆ ಅಕ್ಕಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ. ಇ-ಹರಾಜಿನಲ್ಲಿ ಭಾಗಿಯಾಗದೆ ನೇರವಾಗಿ ಎಫ್​ಸಿಐನಲ್ಲಿ ಖರೀದಿಸುವ ಅವಕಾಶ ಕೊಡಲಾಗಿದೆ.

ಹಿಂದೆ ಪ್ರತಿ ಕೆಜಿಗೆ 28 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ, 2024ರ ಜೂನ್​ನಿಂದ 2024ರ ಡಿಸೆಂಬರ್​ವರೆಗೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಗಣನೀಯವಾಗಿ ಅಕ್ಕಿ ಹಾಗೂ ಗೋಧಿ ಉತ್ಪಾದನೆ ಹೆಚ್ಚಳ ಹಾಗೂ ದೇಶಾದ್ಯಂತ 556 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇರುವ ಕಾರಣ ಪ್ರತಿ ಕೆಜಿಗೆ 5 ರೂ.50 ಪೈಸೆ ಇಳಿಸಿ ಹೊಸ ದರದಲ್ಲಿ ಖರೀದಿಸುವ ಅವಕಾಶ ನೀಡಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್​ಎಸ್), ಇ-ಹರಾಜು ಮೂಲಕ ವ್ಯಾಪಾರಿಗಳು, ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿ ಖಾಸಗಿಯವರು 1 ಟನ್​ನಿಂದ 5 ಸಾವಿರ ಟನ್​ವರೆಗೆ ಖರೀದಿಸಬಹುದು. 2023ರಲ್ಲಿ ಮಳೆ ಕೊರತೆಯಿಂದಾಗಿ ಆಹಾರ ಉತ್ಪಾದನೆ ಕುಸಿತವಾಗಿತ್ತು. ಹೀಗಾಗಿ, ನಿಗದಿಗಿಂತ ಹೆಚ್ಚು ಪಡಿತರ ದಾಸ್ತಾನು ಇರದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ತೊಂದರೆಯಾಗಬಹುದೆಂಬ ಕಾರಣಕ್ಕಾಗಿ ಕೇಂದ್ರ, ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್​ಎಸ್) ಹಿಂಪಡೆದಿತ್ತು. ಆದರೆ,ಈ ಬಾರಿ ದಾಸ್ತಾನು ಇರುವ ಕಾರಣ 2024ರ ಅಕ್ಟೋಬರ್​ನಿಂದ ಒಎಂಎಸ್​ಎಸ್ ಯೋಜನೆ ಮರು ಜಾರಿಗೆ ಬಂದಿದೆ.

ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಅಕ್ಕಿ: ಕಳೆದ ವರ್ಷದಿಂದ ಉಚಿತ ಅಕ್ಕಿ ವಿತರಣೆ ಯೋಜನೆ ಜವಾಬ್ದಾರಿಯನ್ನು ಕೇಂದ್ರ ವಹಿಸಿಕೊಂಡಿದೆ. ಅದರಂತೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪ್ರತಿ ತಿಂಗಳು ರಾಜ್ಯದ 1.02 ಕೋಟಿ ಬಿಪಿಎಲ್ ಚೀಟಿಗಳಿಗೆ, 10.80 ಲಕ್ಷ ಅಂತ್ಯೋದಯ ಕಾರ್ಡ್​ಗಳಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್​ಎಫ್​ಎಸ್​ಎ)ಗಿಂತ ಹೆಚ್ಚು ಇರುವ ಬಿಪಿಎಲ್ ಕಾರ್ಡ್​ಗಳಿಗೆ (14,47,582), ರಾಜ್ಯ ಸರ್ಕಾರ, ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸುತ್ತಿದೆ.

ಅಕ್ಕಿ ಖರೀದಿಸಿದರೆ ನೂರಾರು ಕೋಟಿ ರೂಪಾಯಿ ಉಳಿಕೆ: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ, 2023ರ ಜು.10ರಿಂದ ಜಾರಿಗೆ ತಂದಿದೆ. ಯೋಜನೆಯಡಿ ಬಿಪಿಎಲ್ ಕಾರ್ಡ್​ನ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ.ನಗದನ್ನು ಖಾತೆಗೆ ಹಾಕುತ್ತಿದೆ. ಅಂತ್ಯೋದಯ ಕಾರ್ಡ್​ನಲ್ಲಿರುವ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ., ಐದು ಸದಸ್ಯರಿದ್ದರೆ 510 ರೂ., ಆರು ಸದಸ್ಯರಿದ್ದರೆ 850 ರೂ. ಹಾಕಲಾಗುತ್ತಿದ್ದು, ಪ್ರತಿ ತಿಂಗಳು ಒಂದು ಕೋಟಿ ಕಾರ್ಡ್​ಗಳಿಗೆ 450-500 ಕೋಟಿ ರೂ.ಜಮೆ ಮಾಡಲಾಗುತ್ತಿದೆ. ಇದೀಗ ಕೇಂದ್ರದಿಂದ ಅಕ್ಕಿ ಖರೀದಿಸಿ ಕೊಟ್ಟರೆ ವರ್ಷಕ್ಕೆ ನೂರಾರು ಕೋಟಿ ರೂ.ಉಳಿತಾಯವಾಗಲಿದೆ.

ಮುಖ್ಯಾಂಶಗಳು

  • ಕಮ್ಯೂನಿಟಿ ಕಿಚನ್ಸ್​ಗೆ ಪ್ರತಿ ಕೆಜಿ ಅಕ್ಕಿಯನ್ನು 22.50 ರೂನಂತೆ ಮಾರಾಟ
  • ಕೇಂದ್ರ ಸಹಕಾರಿ ಸಂಸ್ಥೆಗಳಾದ ನಫೆಡ್, ಎನ್​ಸಿಸಿಎಫ್, ಕೇಂದ್ರೀಯ ಭಂಡಾರ್​ಗಳಿಗೆ ಕೆಜಿ ಅಕ್ಕಿಗೆ 24 ರೂ.ನಂತೆ ಮಾರಾಟ
  • ಸಣ್ಣ ಖಾಸಗಿ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ, ವ್ಯಕ್ತಿಗಳಿಗೆ ಪ್ರತಿ ಕೆಜಿಗೆ 28 ರೂ.ನಂತೆ ಮಾರಾಟ
  • ಖಾಸಗಿ ವ್ಯಕ್ತಿಗಳಿಗೆ, ಸಹಕಾರಿ ಸಂಸ್ಥೆಗಳಿಗೆ, ಸಹಕಾರಿ ಒಕ್ಕೂಟಗಳಿಗೆ ಇ-ಹರಾಜಿನ ಮೂಲಕ ಕೆಜಿಗೆ 28 ರೂ.ನಂತೆ ಮಾರಾಟ
  • ಹೆಚ್ಚುವರಿ ಸಾರಿಗೆ ವೆಚ್ಚ ಇಲ್ಲ
  • ಅಕ್ಕಿ ಕೊರತೆಯಿರುವ ಪ್ರದೇಶಗಳಲ್ಲಿ ಇ ಹರಾಜು/ನೇರವಾಗಿ ಮಾರಾಟ
  • ಭತ್ತ ಖರೀದಿ ಪ್ರದೇಶಗಳಲ್ಲಿ ನಫೆಡ್, ಎನ್​ಸಿಸಿಎಫ್, ಕೇಂದ್ರೀಯ ಭಂಡಾರ್​ನಂತಹ ಕೇಂದ್ರ ಸಹಕಾರಿ ಸಂಸ್ಥೆಗಳಿಂದ ಅಕ್ಕಿ ಮಾರಾಟಕ್ಕೆ ಅವಕಾಶ
  • ಹಾಸ್ಟೆಲ್​ಗಳು, ಧಾರ್ವಿುಕ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ ಮುಂತಾದ ಸಾಂಸ್ಥಿಕ ಖರೀದಿದಾರರಿಗೆ ‘ಭಾರತ್ ಬ್ರಾ್ಯಂಡ್’ ಅಕ್ಕಿ ಮಾರಾಟಕ್ಕೆ ಅವಕಾಶ
  • ಖಾಸಗಿ ಕಿರಾಣಿಗಳಿಗೆ ಭಾರತ್ ಬ್ರ್ಯಾಂಡ್​ ಅಕ್ಕಿ ಮಾರಾಟಕ್ಕೆ ಅವಕಾಶ ಇಲ್ಲ
  • ಒಎಂಸಿಯಲ್ಲಿ ನೋಂದಾಯಿತ ಎಥೆನಾಲ್ ಡಿಸ್ಟ್ರಿಲರಿಗಳಿಗೆ ಮಾತ್ರ ಅಕ್ಕಿ ಖರೀದಿಗೆ ಅನುಮತಿ

ಮುಕ್ತ ಮಾರುಕಟ್ಟೆಯಲ್ಲಿ ಸಾಮಾನ್ಯ ಅಕ್ಕಿ ಬೆಲೆ 40-45 ರೂ. ಇದೆ. ಆದರೆ, ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗಲೆಂದು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದೆ. ನಮ್ಮ ಗೋದಾಮುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ, ಗೋಧಿ ಸಂಗ್ರಹವಿದೆ. ರಾಜ್ಯ ಸರ್ಕಾರಕ್ಕೂ ಹೆಚ್ಚುವರಿ ಅಕ್ಕಿ ವಿತರಿಸಲು ಈಗಾಗಲೇ ಸಿದ್ಧವಿದ್ದೇವೆ.

| ಬಿ.ಒ.ಮಹೇಶ್ವರಪ್ಪ ಎಫ್​ಸಿಐ ಕರ್ನಾಟಕ ಶಾಖೆ ಪ್ರಧಾನ ವ್ಯವಸ್ಥಾಪಕ

ಆತ ವೈಟ್​ಬಾಲ್​ ಕ್ರಿಕೆಟ್​ನ… Virat Kohli ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್​ ಆಟಗಾರ

ಸ್ಯಾಂಡಲ್​ವುಡ್​ನ ಹಿರಿಯ ನಟ ಅನಂತ್​​ನಾಗ್​ಗೆ Padma Bhushan ಪ್ರಶಸ್ತಿ

Share This Article

ladies finger Benefits : ಬೆಂಡೆಕಾಯಿ ಒಳ್ಳೆಯದು, ಆದ್ರೆ ಅಪ್ಪಿತಪ್ಪಿಯೂ ಸಹ ಇವ್ರು ಬೆಂಡೆಕಾಯಿ ತಿನ್ನಲೇಬಾರದು..!

ladies finger Benefits : ತರಕಾರಿಗಳಲ್ಲಿ ಒಂದಾದ ಬೆಂಡೆಕಾಯಿಯು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ…

ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake

Snake : ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಂಪಿನ ವಾತಾವರಣ ಅರಸಿಕೊಂಡು ಹಾವುಗಳು ಜನವಸತಿ ಪ್ರದೇಶಗಳತ್ತ…

ಚಳಿಗಾಲದಲ್ಲಿ ನೀವು ಹೆಚ್ಚು ನಿದ್ರೆ ಮಾಡುವುದು ಏಕೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ… Sleep

Sleep : ಚಳಿಗಾಲ ಬಂದಾಗ ಬಹುತೇಕರಿಗೆ ತುಂಬಾ ಆಲಸ್ಯವಾಗುತ್ತದೆ. ಏನೂ ಮಾಡಲೂ ಮನಸಿರುವುದಿಲ್ಲ. ಸೋಮಾರಿತನ ಕಾಡುತ್ತದೆ.…