ಜೋರಹಾಟ್: ವಿಶ್ವ ಪರಂಪರೆಯ ತಾಣ ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ವಾರ್ಷಿಕ ಪ್ರವಾಹದಿಂದ ಪ್ರಾಣಿಗಳನ್ನು ರಕ್ಷಿಸಲು ಅವುಗಳಿಗೆ ಆಶ್ರಯ ಒದಗಿಸಲು ಉದ್ಯಾನವನದೊಳಗೆ 32 ಕಿ.ಮೀ ಉದ್ದದ ಕೃತಕ ಎತ್ತರದ ಪ್ರದೇಶವನ್ನು ನಿರ್ಮಿಸುವ ಅಸ್ಸಾಂ ಸರ್ಕಾರದ ಪ್ರಸ್ತಾಪಕ್ಕೆ ಕೇಂದ್ರವು ಅನುಮತಿ ನೀಡಿದೆ.
ವನ್ಯಜೀವಿಗಳಿಗೆ, ಅದೂ ವಿಶೇಷವಾಗಿ ಒಂದು ಕೊಂಬಿನ ಖಡ್ಗಮೃಗಕ್ಕೆ ಹೆಸರುವಾಸಿಯಾಗಿರುವ ವಿಶ್ವ ಪರಂಪರೆಯ ತಾಣ ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರೀ ಮಳೆಯಿಂದಾಗಿ ಪ್ರತಿ ವರ್ಷ ಪ್ರವಾಹಕ್ಕೆ ನೂರಾರು ಪ್ರಾಣಿಗಳು ಅಸುನೀಗುತ್ತವೆ.
ಇದನ್ನೂ ಓದಿ: ಆಗಸ್ಟ್ ಮೊದಲ ವಾರ ಎಸ್ಸೆಸ್ಸೆಲ್ಸಿ ಫಲಿತಾಂಶ: ಸುರೇಶ್ ಕುಮಾರ್
ಭಾನುವಾರದವರೆಗೆ, ಪ್ರವಾಹ ಪೀಡಿತ ರಾಷ್ಟ್ರೀಯ ಉದ್ಯಾನದಲ್ಲಿ 9 ಖಡ್ಗಮೃಗಗಳು ಸೇರಿದಂತೆ 108 ಪ್ರಾಣಿಗಳು ಸಾವನ್ನಪ್ಪಿವೆ. ಭಾನುವಾರ ಸಂಜೆಯವರೆಗೆ ಪ್ರವಾಹ ಪರಿಸ್ಥಿತಿ ಬದಲಾಗದೆ ಇರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ವಿಷಯವನ್ನು ಗಂಭೀರವಾಗಿ ಗಮನಿಸಿ, ಸರ್ಕಾರ ಎತ್ತರದ ಪ್ರದೇಶ (ಹೈಲ್ಯಾಂಡ್)ನಿರ್ಮಾಣಕ್ಕೆ ಅನುಮತಿ ನೀಡಿದ್ದು ಮಳೆಗಾಲದ ನಂತರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
ಕೃತಕ ಎತ್ತರದ ಪ್ರದೇಶ ನಿರ್ಮಿಸುವುದರಿಂದ ಆ ಪ್ರದೇಶ ಅಸ್ಸಾಂನ ವಾರ್ಷಿಕ ಪ್ರವಾಹದ ವೇಳೆ ಉದ್ಯಾನವನದ ಪ್ರಾಣಿಗಳಿಗೆ ಸುರಕ್ಷತೆ ತಾಣವಾಗಲಿದೆ. ಮಳೆಗಾಲದ ನಂತರ, ಅರಣ್ಯ ಅಧಿಕಾರಿಗಳು ಗಸ್ತು ತಿರುಗಲು ಎತ್ತರದ ಪ್ರದೇಶ ಸಹಾಯವಾಗುತ್ತದೆ.
ಇದನ್ನೂ ಓದಿ: ಅಯೋಧ್ಯೆ ಕುರಿತು ಅರ್ಜಿ ಸಲ್ಲಿಸಿ ಒಂದೊಂದು ಲಕ್ಷ ದಂಡ ಹಾಕಿಸಿಕೊಂಡರು!
ಇದರ ಉದ್ದೇಶಿತ 32 ಕಿ.ಮೀ ಉದ್ದವಾಗಿದ್ದು, ಉದ್ಯಾನದೊಳಗಿನ ಅತಿದೊಡ್ಡ ಮಾನವ ನಿರ್ಮಿತ ಎತ್ತರದ ಪ್ರದೇಶವಾಗಲಿದೆ. ಇದು ಕಾಜಿರಂಗ ಅರಣ್ಯ ಶ್ರೇಣಿಯಿಂದ ಪ್ರಾರಂಭವಾಗಲಿದ್ದು, ಉದ್ಯಾನದಲ್ಲಿನ ಬಿಸ್ವನಾಥ್ ಅರಣ್ಯ ವ್ಯಾಪ್ತಿಯವರೆಗೆ ವಿಸ್ತರಿಸಲಿದೆ.
ಪ್ರಸ್ತುತ, ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 144 ಮಾನವ ನಿರ್ಮಿತ ಎತ್ತರದ ಪ್ರದೇಶಗಳಿವೆ. ಅವುಗಳಲ್ಲಿ 33 ಪ್ರದೇಶಗಳನ್ನು 2019 ರಲ್ಲಿ ಮತ್ತು 111 ಪ್ರದೇಶಗಳನ್ನು 1990 ರಲ್ಲಿ ನಿರ್ಮಿಸಲಾಗಿದೆ. ಇಷ್ಟಾದರೂ ವಾರ್ಷಿಕ ಪ್ರವಾಹದ ಸಮಯದಲ್ಲಿ ಉದ್ಯಾನದಲ್ಲಿ ಎಲ್ಲಾ ಪ್ರಾಣಿಗಳಿಗೆ ಆಶ್ರಯ ನೀಡಲು ಅವು ಸಾಕಾಗುವುದಿಲ್ಲ, ಇದರಿಂದ ಒತ್ತಾಯಪೂರ್ವಕವಾಗಿ ಪ್ರಾಣಿಗಳು ಹೊರಹೋಗುವಂತಾಗಿದ್ದು, ಉದ್ಯಾನವನದಿಂದ ಹೊರಹೋಗಲು ಮತ್ತು ಪಕ್ಕದ ಕಾರ್ಬಿ ಬೆಟ್ಟಗಳಲ್ಲಿ ಆಶ್ರಯ ಪಡೆಯಲು ಪ್ರಾಣಿಗಳು ರಾಷ್ಟ್ರೀಯ ಹೆದ್ದಾರಿ 37 ಅನ್ನು ದಾಟಬೇಕಿರುತ್ತದೆ.
ಪ್ರವಾಹ ಪೀಡಿತ ಉದ್ಯಾನವನದಿಂದ ಪ್ರಾಣಿಗಳು ಹೊರಹೋಗುತ್ತಿದ್ದಂತೆ, ಹೆದ್ದಾರಿ ದಾಟುವಾಗ ಕಳ್ಳ ಬೇಟೆಗಾರರಿಂದ ಅಥವಾ ವಾಹನಗಳಿಗೆ ಡಿಕ್ಕಿ ಹೊಡೆಯುವ ಅಪಾಯ ಹೆಚ್ಚಾಗುತ್ತದೆ. ಈ ವರ್ಷ, ಹೆದ್ದಾರಿ ದಾಟುವಾಗ ಒಟ್ಟು 15 ಹಾಗ್ ಜಿಂಕೆಗಳು ವಾಹನಗಳಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿವೆ.
ಮುಳುಗಿತು ಆಸ್ಸಾಂನ ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ; 100ಕ್ಕೂ ಹೆಚ್ಚು ಪ್ರಾಣಿಗಳು ಸಾವು