ಸಿನಿಮಾ

ದೇಶದ ಹಿತಕ್ಕಾಗಿ ಬಿಜೆಪಿಯಿಂದ ಹಲವು‌ ನಿರ್ಣಯ

ದೇಶ ಮೊದಲು ಎನ್ನುವ ಪಕ್ಷ ಬಿಜೆಪಿ, ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶಕ್ಕೆ ಹಿತವಾಗುವ ನೂರಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬಿಜೆಪಿ ಅಭ್ಯಥಿರ್ಗಳು ಧೈರ್ಯದಿಂದ ಮತ ಕೇಳುತ್ತಿದ್ದಾರೆ. ಆದರೆ, ಕೆಲವರು ಕಾಂಗ್ರೆಸ್ ಪಾಟಿರ್ ನೋಡದೇ ನನ್ನನ್ನು ನೋಡಿ ವೋಟ್ ಹಾಕಿ ಎಂದು ಕೇಳುವ ಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪರೋಕ್ಷವಾಗಿ ಜಗದೀಶ ಶೆಟ್ಟರ್ ಅವರನ್ನು ಟೀಕಿಸಿದರು.


ಇಲ್ಲಿಯ ಲಿಂಗರಾಜ ನಗರದ ಸಾಂಸತಿಕ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.


ಹೊಸ ರೀತಿಯಲ್ಲಿ ಮತ ಕೇಳುವ ಸಂಸತಿ ಪ್ರಾರಂಭ ಆಗಿದೆ. ಪಾಟಿರ್ ನೋಡಿ ಮತ ನೀಡಬೇಡಿ ಎನ್ನುವವರನ್ನು ಯಾರೂ ಒಪ್ಪಿಕೊಳ್ಳುವದಿಲ್ಲ. ಆಟಿರ್ಕಲ್ 370ಗೆ ಅಂದು ವಿರೋಧ ಮಾಡಿದ್ದ ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದರೆ ಅದನ್ನು ವಾಪಸ್ ಜಾರಿ ಮಾಡುತ್ತೇವೆ ಎನ್ನುತ್ತಾರೆ. ಒಂದು ವೇಳೆ ಕಾಂಗ್ರೆಸ್ 370 ವಾಪಸ್ ತಂದರೆ ಆ ಪಕ್ಷ ಬಿಟ್ಟು ಹೊರಗೆ ಬರುತ್ತೀರಾ ಎಂದೂ ಶೆಟ್ಟರ್ಗೆ ಪ್ರಶ್ನಿಸಿದರು.


ರಾಮನ ಅಸ್ವಿತ್ವ ಪ್ರಶ್ನೆ ಮಾಡಿದವರು, ಗೋಹತ್ಯೆ ನಿಷೇಧ ಕಾನೂನು ವಿರೋಧಿಸಿದ ಕಾಂಗ್ರೆಸ್ ಎಂದೂ ಅಧಿಕಾರಕ್ಕೆ ಬರುವುದಿಲ್ಲ. ದೇಶವನ್ನು ಗುಲಾಮಿತನದಲ್ಲಿ ಇಡುವ ಮನೋಸ್ಥಿತಿ ಕಾಂಗ್ರೆಸ್ಸಿನದು ಎಂದು ಹರಿಹಾಯ್ದ ಜೋಶಿ, ಇಂದು ಭಾರತ ಮೋದಿ ಅವರ ನಾಯಕತ್ವದ ಮೇಲೆ ನಡೆಯುತ್ತಿದೆ. ಕಾಂಗ್ರೆಸ್ ಸಂಸತಿಯಿಂದ ಭಾರತವನ್ನು ಮುಕ್ತ ಮಾಡಬೇಕೆಂದು ಹೊರಟಿದ್ದಾರೆ ಎಂದು ಹೇಳಿದರು.


ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಆರು ಬಾರಿ ಬಿಜೆಪಿಗೆ ಮತ ಕೊಟ್ಟಿದ್ದೀರಿ. ಇದೀಗ ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರಿಗೆ ಮತ ನೀಡಿ. ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ವೇಗ ಮುಂದುವರಿಸಿ. ಯುವಕ ಮಹೇಶ ಟೆಂಗಿನಕಾಯಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ ಎಂದರು.
ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ಕಿಶನ್ ಬೆಳಗಾವಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ರಮೇಶ ಪಾಟೀಲ, ವಸಂತ ಹೊರಟ್ಟಿ, ರಾಜಣ್ಣ ಬತ್ಲಿ, ಸಿಂದಗಿ, ಇತರರು ಇದ್ದರು.

ಪ್ರಜ್ಞಾವಂತರು:
ಉದ್ಯಮಿ, ಮಾಜಿ ಸಂಸದ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ಪ್ರತಿಯೊಂದು ಚುನಾವಣೆಯಲ್ಲಿ ಲಿಂಗರಾಜನಗರ, ವಿದ್ಯಾನಗರ ಭಾಗದ ಜನರು ಬಿಜೆಪಿಗೆ ಆಶೀರ್ವಾದ ಮಾಡುತ್ತ ಬಂದಿದ್ದಾರೆ. ಪ್ರಾಮಾಣಿಕವಾಗಿ ಪಕ್ಷ ಬೆಂಬಲಿಸಿದ್ದೀರಿ. ಆದರೆ, ಅಷ್ಟೇ ದುರ್ದೈವಿಗಳಾಗಿದ್ದೀರಿ. ಬಿಆರ್ಟಿಎಸ್ ಕಾರಿಡಾರ್ಗೆ ಹೊಂದಿಕೊಂಡಿರುವುದರಿಂದ ಇಲ್ಲಿ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ಭಯದಲ್ಲಿ ನೀವು ಓಡಾಡುವಂತಾಗಿದೆ. ಇದು ಹಿಂದಿನ ಶಾಸಕರ ಯೋಜನೆ ಎಂದು ಜಗದೀಶ ಶೆಟ್ಟರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಇನ್ನು ಹುಬ್ಬಳ್ಳಿಯಲ್ಲಿ ಈ ವರೆಗೆ ಆಗಿರುವ ಎಲ್ಲ ಕೆಲಸಗಳನ್ನು ತಾವೇ ಮಾಡಿದ್ದಾಗಿ ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದರು.

ಕಾಂಗ್ರೆಸ್ನವರು ಬಿ.ಎಲ್. ಸಂತೋಷ್ ಲಿಂಗಾಯತ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಜಾತಿ ವಿಷ ಬೀಜ ಬಿತ್ತುವುದನ್ನು ಕಾಂಗ್ರೆಸ್ ಬಿಡಬೇಕು. ಬಿಜೆಪಿಯಿಂದ ಲಿಂಗಾಯತ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದರು.

ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ನರೇಂದ್ರ ಮೋದಿ ಅವರಿಂದ ದೇಶದಲ್ಲಿ ಹೊಸ ಯುಗ ಆರಂಭವಾಗಿದೆ. ದೇಶದ ಎಷ್ಟೋ ವರ್ಷದ ಸಮಸ್ಯೆಗಳು ಬಗೆ ಹರಿದಿವೆ. ಸುಮಾರು 800ರಷ್ಟು ಕಾಯ್ದೆಗಳಿಗೆ ಹೊಸ ರೂಪ ನೀಡಿದ್ದಾರೆ. ಜಗತ್ತಿನಲ್ಲಿ ದೇಶದ ಗೌರವ ಹೆಚ್ಚಾಗಿದೆ. ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಅಭಿವೃದ್ಧಿ ಪರ್ವ ಮುಂದುವರಿಯಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಅಧಿಕಾರಕ್ಕೆ ಬರಬೇಕು. ಬಿಜೆಪಿ ಅಭ್ಯಥಿರ್ಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

Latest Posts

ಲೈಫ್‌ಸ್ಟೈಲ್