ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ

ವನಿತೆಯರ ಆತ್ಮವಿಶ್ವಾಸ ವೃದ್ಧಿಸಿದ ಕ್ರಮಗಳು

ಸುಕನ್ಯಾ ಸಮೃದ್ಧಿ

ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆ ಹೊರೆ ಎಂದು ಭಾವಿಸುವ ಮಾನಸಿಕತೆ ಇನ್ನೂ ಇದೆ. ಹಾಗಾಗಿ, ಹೆಣ್ಣುಮಕ್ಕಳಿಗೆ ಉತ್ತಮ ಭವಿಷ್ಯ ಒದಗಿಸಲು ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸಿದೆ. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಹೆಸರಲ್ಲಿ ಉಳಿತಾಯ ಖಾತೆ ತೆರೆದು ವರ್ಷಕ್ಕೆ ಕನಿಷ್ಠ 1 ಸಾವಿರ ರೂ., ಗರಿಷ್ಠ 1.5 ಲಕ್ಷ ರೂ. ಇರಿಸಬಹುದು. ಇದಕ್ಕೆ ಶೇ.9.1ರ ಬಡ್ಡಿ ನೀಡಲಾಗುತ್ತಿದ್ದು, ಫಲಾನುಭವಿಯ 18ನೇ ವಯಸ್ಸಿಗೆ ಶೇಕಡ 50ರಷ್ಟು ಮೊತ್ತ ಕೈಸೇರುತ್ತದೆ. ಶಿಕ್ಷಣ ಅಥವಾ ಮದುವೆಯ ಬಳಿಕ ಈ ಖಾತೆ ಸ್ಥಗಿತಗೊಳಿಸಬಹುದಾಗಿದೆ.

# ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಮೂಲಕ ಆರ್ಥಿಕ ಸಬಲೀಕರಣದ ಗುರಿ.

# ತ್ರಿವಳಿ ತಲಾಕ್ ವಿರುದ್ಧ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದೆ.

# ಮುದ್ರಾ ಯೋಜನೆಯ ಫಲಾನುಭವಿಗಳ ಪೈಕಿ ಶೇಕಡ 70ರಷ್ಟು ಮಹಿಳೆಯರು.

# ಮುದ್ರಾ ಮತ್ತು ಸ್ಟಾ್ಯಂಡ್​ಅಪ್ ಯೋಜನೆಗಳಿಂದ 9 ಕೋಟಿ ಮಹಿಳೆಯರು ಲಾಭ ಪಡೆದುಕೊಂಡಿದ್ದಾರೆ.

# ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಲಾಗಿದೆ.

# ಗರ್ಭೀಣಿಯರಿಗೆ 6 ಸಾವಿರ ರೂ. ಸಹಾಯಧನ. ಪ್ರತಿ ವರ್ಷ 50 ಲಕ್ಷಕ್ಕಿಂತ ಅಧಿಕ ಮಹಿಳೆಯರಿಗೆ ಲಾಭ.

# 3.8 ಕೋಟಿ ಮಹಿಳೆಯರಿಗೆ ಎಲ್​ಪಿಜಿ ಸಂಪರ್ಕ ನೀಡಲಾಗಿದೆ. ಎಲ್​ಪಿಜಿ ಸಂಪರ್ಕದ ಗುರಿಯನ್ನು 8 ಕೋಟಿಗೆ ಹೆಚ್ಚಿಸಲಾಗಿದೆ.

# ‘ಮಿಷನ್ ಇಂದ್ರಧನುಷ್’ ಅಡಿ 80 ಲಕ್ಷಕ್ಕಿಂತ ಅಧಿಕ ಗರ್ಭೀಣಿಯರಿಗೆ ಲಸಿಕೆ.

# ಸಿಂಗಲ್ ಮದರ್​ಗಾಗಿ ಪಾಸ್​ಪೋರ್ಟ್ ನಿಯಮಗಳ ಸರಳೀಕರಣ.

19,183

ಸುಕನ್ಯಾ ಸಮೃದ್ಧಿ ಯೋಜನೆ ಯಡಿ ದೇಶಾದ್ಯಂತ 1.26 ಕೋಟಿ ಖಾತೆಗಳನ್ನು ತೆರೆಯಲಾಗಿದ್ದು, 19,183 ಕೋಟಿ ರೂ. ಜಮೆಯಾಗಿದೆ.

ಬೇಟಿ ಬಚಾವೋ ಬೇಟಿ ಪಢಾವೋ

ಲಿಂಗಾನುಪಾತದಲ್ಲಿ ಸಮಾನತೆ ಸಾಧಿಸಲು ಆರಂಭಿಸಲಾದ ಮಹತ್ವದ ಯೋಜನೆ ಇದು. ಬಾಲಕಿಯರಿಗೆ ಶಿಕ್ಷಣ ನೀಡುವ ಅಗತ್ಯದ ಕುರಿತು ಸಾಮಾಜಿಕ ಆಂದೋಲನದಂತೆ ಅರಿವು ಮೂಡಿಸಲಾಗುತ್ತಿದ್ದು, 100 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಬಂದಿದೆ. ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲತೆಗಳನ್ನು ಕಲ್ಪಿಸಲಾಗಿದೆ, ಅವರು ಉನ್ನತ ಶಿಕ್ಷಣ ಕೈಗೊಳ್ಳಲು ಪ್ರೇರೇಪಿಸಲಾಗುತ್ತಿದೆ.