More

    ರಾಜ್ಯಕ್ಕೆ ಭರ್ಜರಿ ನೆರೆವು | ಕೇಂದ್ರದಿಂದ 1869 ಕೋಟಿ ರೂ. 2ನೇ ಕಂತಿನ ಪರಿಹಾರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತುಮಕೂರು ಭೇಟಿ ವೇಳೆ ರಾಜ್ಯದ ನೆರೆ ಪರಿಹಾರಕ್ಕೆ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿಟ್ಟಿದ್ದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ನೆರೆ ಪರಿಹಾರದ 2ನೇ ಕಂತಿನ ಹಣವಾಗಿ 1869.85 ಕೋಟಿ ರೂ. ಬಿಡುಗಡೆಗೆ ಸಮ್ಮತಿಸಿದೆ. ಮೊದಲ ಕಂತಿನಲ್ಲಿ ಕೇಂದ್ರದಿಂದ 1200 ಕೋಟಿ ರೂ. ಪರಿಹಾರ ಸಿಕ್ಕಿತ್ತು.

    ಇದರಿಂದಾಗಿ ಪ್ರವಾಹ ಪ್ರದೇಶಗಳು ಹಾಗೂ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಒಟ್ಟು 3069 ಕೋಟಿ ರೂ. ಪರಿಹಾರ ಸಿಕ್ಕಂತಾಗಲಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಉನ್ನತ ಸಚಿವರ ಸಮಿತಿಯು ಪರಿಹಾರ ಹಣ ಬಿಡುಗಡೆಯ ವರದಿಗೆ ಅನುಮೋದನೆ ನೀಡಿದೆ.

    ಅತಿವೃಷ್ಟಿಯಿಂದಾಗಿ ಸುಮಾರು 38000 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜು ವರದಿಯನ್ನು ಕೇಂದ್ರಕ್ಕೆ ನೀಡಿತ್ತು. ನಿಯಮಾವಳಿಗಳ ಪ್ರಕಾರ ರಾಜ್ಯಕ್ಕೆ ಅಂದಾಜು 3800 ಕೋಟಿ ರೂ. ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಮೊದಲನೇ ಕಂತಿನಲ್ಲಿ 1200 ಕೋಟಿ ರೂ. ಪರಿಹಾರ ಘೋಷಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರ 2ನೇ ಕಂತಿನ ಹಣ ಬಿಡುಗಡೆಗೆ ಕೋರಿತ್ತು.

    ಕರ್ನಾಟಕಕ್ಕೇ ಹೆಚ್ಚಿನ ಪಾಲು: ಕೇಂದ್ರದ ಉನ್ನತ ಸಚಿವರ ಸಮಿತಿಯು ಕರ್ನಾಟಕ ಸೇರಿ 7 ರಾಜ್ಯಗಳಿಗೆ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿಧಿಯಿಂದ ಒಟ್ಟು ರೂ. 5908 ಕೋಟಿ ಪರಿಹಾರ ಹಣ ಘೋಷಿಸಿದೆ. ಅಸ್ಸಾಂಗೆ ರೂ. 616.63 ಕೋಟಿ, ಹಿಮಾಚಲ ಪ್ರದೇಶಕ್ಕೆ ರೂ. 284.93 ಕೋಟಿ, ಮಧ್ಯಪ್ರದೇಶಕ್ಕೆ ರೂ. 1749.73 ಕೋಟಿ ಸಿಕ್ಕಿದೆ. ಮಹಾರಾಷ್ಟ್ರಕ್ಕೆ ರೂ. 956.93 ಕೋಟಿ, ತ್ರಿಪುರಕ್ಕೆ ರೂ. 63.32 ಕೋಟಿ, ಹಾಗೂ ಉತ್ತರ ಪ್ರದೇಶಕ್ಕೆ ರೂ. 367.17 ಕೋಟಿ ಪರಿಹಾರ ವಿತರಣೆಗೆ ಸಮ್ಮತಿಸಲಾಗಿದೆ. ಕೇಂದ್ರ ನೀತಿ ಆಯೋಗದಲ್ಲಿ ನಡೆದ ಉನ್ನತ ಸಮಿತಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಸಚಿವರು ಹಾಗೂ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts