ಕೊಡಗಿನ ರೈತರ ಕಣ್ಣೀರು ಒರೆಸದ ಕೇಂದ್ರ ಸರ್ಕಾರ: ಮಾಜಿ ಎಂಪಿ ವಿಜಯಶಂಕರ್ ಆಕ್ರೋಶ

ಮಡಿಕೇರಿ: ಕೇಂದ್ರ ಸರ್ಕಾರ ಕೊಡಗಿನ ರೈತರು, ಬೆಳೆಗಾರರ ಕಣ್ಣೀರು ಒರೆಸಲು ವಿಫಲರಾಗಿದ್ದಾರೆ ಎಂದು ಮೈಸೂರು- ಕೊಡಗು ಲೋಕಸಭೆ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಆರೋಪಿಸಿದ್ದಾರೆ.

ಪ್ರಕೃತಿ ವಿಕೋಪಕ್ಕೆ ಸಿಲುಕಿ ಕೊಡಗಿನ ಜನ ತತ್ತರಿಸಿ ಹೋಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣ ನಿಧಿ ಮಾರ್ಗಸೂಚಿ ಅನ್ವಯ ಬೆಳೆ ನಷ್ಟಕ್ಕೆ ಒಂದು ಹೆಕ್ಟೇರ್​ಗೆ 37,500 ರೂ. ನೀಡಲಾಗುತ್ತಿದೆ. ಇದು ಏನೇನು ಸಾಲದು. ಹೆಚ್ಚಿನ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಗಮನ ಹರಿಸಲಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಕೇಂದ್ರ ಸಚಿವರು, ಅಧಿಕಾರಿಗಳು ಕೊಡಗಿಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

One Reply to “ಕೊಡಗಿನ ರೈತರ ಕಣ್ಣೀರು ಒರೆಸದ ಕೇಂದ್ರ ಸರ್ಕಾರ: ಮಾಜಿ ಎಂಪಿ ವಿಜಯಶಂಕರ್ ಆಕ್ರೋಶ”

Comments are closed.