More

    ದೇಶದ ಐಕ್ಯತೆ ಮುರಿಯುವ ಪ್ರಯತ್ನ; ಕೇಂದ್ರದ ವಿರುದ್ಧ ಚಿಂತಕ ಮಹೇಂದ್ರ ಕುಮಾರ ಕಿಡಿ

    ಸಿಂಧನೂರು: ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕಾಯ್ದೆ ಮೂಲಕ ದೇಶದ ಐಕ್ಯತೆ ಮುರಿಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ನಾವೆಲ್ಲರೂ ಒಗ್ಗೂಡಿ ಕಾಯ್ದೆ ವಿರೋಧಿಸುವ ಅಗತ್ಯವಿದೆ ಎಂದು ನಮ್ಮ ಧ್ವನಿ ಚಿಂತಕ ಮಹೇಂದ್ರ ಕುಮಾರ ಹೇಳಿದರು.

    ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಭಾನುವಾರ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು. ಕಾಯ್ದೆಯಿಂದ ಭಾರತೀಯ ಪ್ರಜೆಗಳ ಒಗ್ಗಟ್ಟನ್ನು ಒಡೆಯುವ ಯತ್ನವಾಗಿದೆ. ಆರ್‌ಎಸ್‌ಎಸ್ ದೇಶ ಭಕ್ತಿಯ ಹೆಸರಿನಲ್ಲಿ ಗಲಭೆ ಸೃಷ್ಟಿಸಲು ಮುಂದಾಗಿದೆ ಎಂದರು.

    ಜನಪರ ಚಿಂತಕಿ ಕೆ.ನೀಲಾ ಮಾತನಾಡಿ, ಬಿಜೆಪಿಯ ಧರ್ಮಾಧಾರಿತ ರಾಜಕೀಯಕ್ಕೆ ಅಮಾಯಕ ಮುಸ್ಲಿಮರು ಬಲಿಯಾಗಬೇಕಿದೆ ಎಂದರು. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು.

    ಡಿ.ಎಚ್.ಕಂಬಳಿ, ಶಿರೂರು ವಿಜಯ ಮಹಾಂತೇಶ್ವರತೀರ್ಥ ಮಠದ ಡಾ.ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂತಕ ನಿಕಿತ್‌ರಾಜ್ ಮೌರ್ಯ, ಹೈದರಾಬಾದ್ ತಹಫುಜ್ ಷರಿಯತ್ ಫೌಂಡೇಶನ್ ಅಧ್ಯಕ್ಷ ಮುಫ್ತಿ ತಂಜೀಮ್ ಆಲಂ ಖಾಸ್ಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts