More

    ಜನರ ನಿರೀಕ್ಷೆ ಸುಳ್ಳಾಗಲಿಲ್ಲ: ತಜ್ಞರ ಅಭಿಪ್ರಾಯ

    ಜನರ ನಿರೀಕ್ಷೆ ಸುಳ್ಳಾಗಲಿಲ್ಲ: ತಜ್ಞರ ಅಭಿಪ್ರಾಯವೈಯಕ್ತಿಕ ತೆರಿಗೆಗೆ ಸಂಬಂಧಿಸಿದಂತೆ ಜನ ಸಾಮಾನ್ಯರಿಂದ ಬಹಳಷ್ಟು ನಿರೀಕ್ಷೆಗಳು ಪ್ರತಿ ಬಾರಿಯಂತೆ ಈ ಬಾರಿಯೂ ಇದ್ದವು. ಕೇಂದ್ರದ ಬಜೆಟ್​ನಲ್ಲಿ ಜನರ ನಿರೀಕ್ಷೆಯನ್ನು ಸುಳ್ಳಾಗಿಸಲಿಲ್ಲ. ಸಾಕಷ್ಟು ವಿನಾಯ್ತಿ ನೀಡುವ ಮೂಲಕ ಸಂಬಳ ಆಧಾರಿತ ಮಧ್ಯಮ ವರ್ಗದ ಜನರಿಗೆ ಒಳ್ಳೆಯ ಕೊಡುಗೆಯನ್ನೇ ನೀಡಿದ್ದಾರೆ.

    ತೆರಿಗೆ ಆದಾಯವು ಯಾವಾಗಲೂ ಪ್ರಗತಿಪರ ತೆರಿಗೆಯಾಗಿರಬೇಕು. ಅಂದರೆ ಕಡಿಮೆ ಆದಾಯ ಪಡೆಯುವವರು ಕಡಿಮೆ ತೆರಿಗೆಯನ್ನು ಮತ್ತು ಅಧಿಕ ಆದಾಯ ಪಡೆಯುವವರು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕು. ಅದರಂತೆ ನಿರ್ಮಲಾ ಸೀತಾರಾಮನ್ ಐದು ಪ್ರಮುಖ ಘೋಷಣೆಗಳನ್ನು ಪ್ರಕಟಿಸಿದ್ದಾರೆ. ಹೊಸ ತೆರಿಗೆ ಪದ್ಧತಿಯ ಜತೆಗೆ ಹಳೆಯ ಪದ್ಧತಿ ಚಾಲ್ತಿಯಲ್ಲಿರುತ್ತದೆ. ತೆರಿಗೆ ಸ್ಲ್ಯಾಬ್​ಗಳನ್ನು ಆರರಿಂದ ಐದಕ್ಕೆ ಇಳಿಸಲಾಗಿದೆ. 7 ಲಕ್ಷ ರೂ.ಗಳ ತನಕ ತೆರಿಗೆ ವಿನಾಯ್ತಿ ಸಿಗುತ್ತದೆ. ಇದೊಂದು ದೊಡ್ಡ ಅನುಕೂಲವಾಗಲಿದೆ. 3 ಲಕ್ಷ ರೂಪಾಯಿಗಳ ತನಕ ಯಾವುದೇ ತೆರಿಗೆ ಇರುವುದಿಲ್ಲ.

    3 ರಿಂದ 6 ಲಕ್ಷ ರೂ.ಗಳ ತನಕ ಶೇ.5, 6 ರಿಂದ 9 ಲಕ್ಷ ರೂ.ಗಳ ತನಕ ಶೇ.10, 9 ಲಕ್ಷ ರೂ.ಗಳಿಂದ 12 ಲಕ್ಷ ರೂ.ಗಳ ತನಕ ಶೇ.15, 12 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳ ತನಕ ಶೇ.20 ಹಾಗೂ 15 ಲಕ್ಷ ರೂ. ಮೇಲ್ಪಟ್ಟು ಶೇ.30 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದನ್ನು ಗಮನಿಸಿದಾಗ ಕಡಿಮೆ ಆದಾಯದವರಿಗೆ ಅನುಕೂಲವಾಗಿರುವುದು ಕಂಡು ಬರುತ್ತದೆ. 15.5 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಟಟ್ಟ ಆದಾಯವನ್ನು ಪಡೆಯುವವರಿಗೆ 52,500 ರೂ.ಗಳ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ನೀಡುವುದು ಉತ್ತಮವಾದ ಪದ್ಧತಿಯೇ ಆಗಿದೆ. ಹಿಂದೆ ಗರಿಷ್ಠ ತೆರಿಗೆ ಮೇಲೆ ವಿಧಿಸುತ್ತಿದ್ದ ಶೇ.37 ರಷ್ಟು ಸರ್​ಜಾರ್ಜ್​ನ್ನು ಹೊಸ ತೆರಿಗೆ ನೀತಿಯಡಿ ಶೇ.25ಕ್ಕೆ ಇಳಿಸಲಾಗಿದೆ. ಇದರಿಂದ ದೇಶದಲ್ಲಿರುವ ಗರಿಷ್ಠ ತೆರಿಗೆ ದರವು ಶೇ.39 ರಷ್ಟು ಕಡಿಮೆಯಾಗುತ್ತದೆ. ಇದರ ಜತೆಗೆ ವೇತನದಾರರಿಗೆ ನೀಡಿರುವ ಮತ್ತೊಂದು ಕೊಡುಗೆ ಎಂದರೆ ರಜೆ ನಗದೀಕರಣದಲ್ಲಿರುವ ವಿನಾಯ್ತಿಯನ್ನು 3 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

    ಬಜೆಟ್​ನಲ್ಲಿ ಪರೋಕ್ಷ ತೆರಿಗೆ ಪ್ರಸ್ತಾವನೆಗಳಿದ್ದು ಅವು ರಫ್ತು ಉತ್ತೇಜನದ ಗುರಿಯನ್ನು ಹೊಂದಿರುವುದು ಕಂಡು ಬರುತ್ತದೆ. ಇದರ ಜತೆಗೆ ಸ್ವದೇಶಿ ಮತ್ತು ಉತ್ಪಾದನೆಯನ್ನು ಪ್ರೋತ್ಸಾಹಿಸುವ ಹಸಿರು ಶಕ್ತಿ ಮತ್ತು ಚಲನಶೀಲತೆಯನ್ನು ಉತ್ತೇಜಿಸುತ್ತದೆ. ಜವಳಿ ಮತ್ತು ಕೃಷಿ ಹೊರತುಪಡಿಸಿ ಸರಕುಗಳ ಮೇಲಿನ ಮೂಲ ಕಸ್ಟಮ್್ಸ ಸುಂಕಗಳನ್ನು 21 ರಿಂದ 13ಕ್ಕೆ ಇಳಿಸಲಾಗಿದೆ. ಆಟಿಕೆ, ಬೈಸಿಕಲ್, ಆಟೋಮೊಬೈಲ್ ಸೇರಿದಂತೆ ವಸ್ತುಗಳ ಮೇಲಿನ ಮೂಲ ಕಸ್ಟಮ್್ಸ ಸುಂಕಗಳು ಸೆಸ್​ಗಳು ಮತ್ತು ಹೆಚ್ಚುವರಿ ಶುಲ್ಕಗಳಲ್ಲಿ ಬದಲಾವಣೆ ಮಾಡುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ. ಜನ ಸಾಮಾನ್ಯರು ಹೆಚ್ಚಿನ ಮಟ್ಟದಲ್ಲಿ ತೆರಿಗೆ ವಿನಾಯ್ತಿ ನಿರೀಕ್ಷೆ ಮಾಡಿದ್ದರು. ಹಲವಾರು ಈಡೇರಿವೆ ಎಂಬುದು ಸುಳ್ಳಲ್ಲ.

    ಮಿತಭಾಷಿ ನಿರ್ಮಲಾ: ಬಜೆಟ್​ ಮಂಡನೆಯಲ್ಲಿ ಕ್ರಮೇಣ ಕಡಿಮೆಯಾದ ಮಾತು; ಯಾವಾಗ ಎಷ್ಟು ಮಾತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts