More

    ಕೃಷಿಗೆ ತೃಪ್ತಿದಾಯಕ ಬಜೆಟ್: ತಜ್ಞರ ಅಭಿಪ್ರಾಯ

    ಕೃಷಿಗೆ ತೃಪ್ತಿದಾಯಕ ಬಜೆಟ್: ತಜ್ಞರ ಅಭಿಪ್ರಾಯಈ ಬಜೆಟ್​ನಲ್ಲಿ ಕೃಷಿ ವಲಯಕ್ಕೆ 90 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ತೃಪ್ತಿದಾಯಕವಾಗಿರುವ ಕೆಲಸವಾಗಿದೆ. ದೇಶದ ಜನಸಂಖ್ಯೆಯ ಶೇ. 40 ರಿಂದ 50 ರಷ್ಟು ಮಂದಿ ಅವಲಂಬಿಸಿರುವುದು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯನ್ನು. ಈ ವಲಯಗಳಿಗೆ ಇನ್ನಷ್ಟು ಆದ್ಯತೆಯನ್ನು ನೀಡಬೇಕಾಗಿತ್ತು. ಕೃಷಿಯಲ್ಲಿ ರೈತರ ಆದಾಯ ದ್ವಿಗುಣ ಹಾಗೂ ತಂತ್ರಜ್ಞಾನ ಬಳಕೆಯ ಬಗ್ಗೆ ಹೇಳುವುದೆಲ್ಲ ಬರೀ ದಾಖಲೆಗಳಲ್ಲಿಯೇ ಉಳಿದಿದೆ. ಅದು ತಳಮಟ್ಟಕ್ಕೆ ತಲುಪಿಲ್ಲ. ತಲುಪಿಸುವ ಕಾರ್ಯವನ್ನು ಬಜೆಟ್ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಾಗಿತ್ತು. ಆದಾಯ ಹೆಚ್ಚಳಕ್ಕೆ ತಾಂತ್ರಿಕತೆಯನ್ನು ಮುಟ್ಟಿಸುವುದಕ್ಕಾಗಿ ಕೃಷಿಯಲ್ಲಿ ಡಿಜಿಟಲ್ ಬಗ್ಗೆ ಪ್ರಸ್ತಾಪವಿದೆ. ಅದನ್ನು ಸ್ವಾಗತಿಸಬಹುದಾಗಿದೆ. ಆ ಕಾರ್ಯ ವಾಸ್ತವವಾಗಿ ಕಾರ್ಯಗತವಾಗಬೇಕಾಗಿದೆ. ಕೃಷಿ ಬೆಳೆಗಳ ಪೈಕಿ ಕನಿಷ್ಠ ಬೆಂಬಲ ಬೆಲೆಯನ್ನು ಎಲ್ಲ ಬೆಳೆಗಳಿಗೆ ನೀಡುವ ಅಗತ್ಯವಿತ್ತು. ಎರಡು ಬೆಳೆಗಳಿಗೆ ಎಂಎಸ್​ಪಿ ನೀಡಿರುವುದು ಸ್ವಾಗತಾರ್ಹ. ಆದರೆ ಅದನ್ನು ಎಲ್ಲ ಬೆಳೆಗಳಿಗೆ ವಿಸ್ತರಣೆ ಮಾಡಿದ್ದರೆ ರೈತರಿಗೆ ಹೆಚ್ಚಿನ ಅನುಕೂಲ ಆಗುತ್ತಿತ್ತು. ಕೃಷಿ ಮಾರುಕಟ್ಟೆಯನ್ನು ಗಟ್ಟಿ ಮಾಡುವ ಪ್ರಯತ್ನ ಆಗಬೇಕಾಗಿದೆ. ಆಗ ಮಾತ್ರ ಕೃಷಿಯಲ್ಲಿ ಸಮಗ್ರ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಕೃಷಿಯಲ್ಲಿ ಕಾರ್ವಿುಕರ ಕೊರತೆ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಇದರಿಂದ ಅನೇಕರು ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಯುವ ಪೀಳಿಗೆಗೆ ತಂತ್ರಜ್ಞಾನ ಬಳಕೆಯ ತರಬೇತಿಯನ್ನು ನೀಡಬೇಕಾಗಿದೆ.

    ರೈತರಿಗೆ 20 ಲಕ್ಷ ಕೋಟಿ ರೂ.ಗಳ ಸಾಲ ನೀಡುವ ಪ್ರಸ್ತಾಪ ಒಳ್ಳೆಯದೇ ಆದರೂ ಬಡ್ಡಿದರ ಕಡಿಮೆ ಮಾಡಿದ್ದರೆ ಅದರ ಫಲ ಹೆಚ್ಚಿನ ರೈತರಿಗೆ ಸಿಗುತ್ತಿತ್ತು. ಕೃಷಿ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡಿರುವುದು ಒಳ್ಳೆಯದೇ. ಆದರೆ ಮೌಲ್ಯವರ್ಧನೆ, ಬ್ರಾಂಡಿಂಗ್, ಪ್ಯಾಕೇಜಿಂಗ್ ಹಾಗೂ ಮಾರುಕಟ್ಟೆಗೆ ಇನ್ನೂ ಹೆಚ್ಚಿನ ನೆರವು ಕೇಂದ್ರದಿಂದ ನೀಡಬೇಕಾಗಿದೆ. ದೇಶದ ಒಂದು ಕೋಟಿ ರೈತರನ್ನು ಸಾವಯವ ಕೃಷಿಗೆ ಒಳಪಡಿಸುವ ಕೆಲಸಕ್ಕೆ ಕೇಂದ್ರ ಮುಂದಾಗಿದೆ. ಸಿರಿಧಾನ್ಯ ವರ್ಷದಲ್ಲಿ ಇದೊಂದು ಒಳ್ಳೆಯ ಕ್ರಮ. ಆದರೆ ಸಾವಯವ ಬೆಳೆ ಹಾಗೂ ರಾಸಾಯನಿಕ ಬೆಳೆಗಳ ನಡುವೆ ವ್ಯತ್ಯಾಸ ತಿಳಿಯುವಂತಹ ಪ್ರಯತ್ನ ಆಗಬೇಕಾಗಿದೆ. ರೈತರ ಕೃಷಿ ಭೂಮಿಯಲ್ಲಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಸತ್ವ ಹೆಚ್ಚಿಸುವ ಕಾರ್ಯಕ್ರಮಗಳತ್ತ ಗಮನ ಇನ್ನೂ ಅಧಿಕವಾಗಬೇಕಾಗಿದೆ.

    ಕೃಷಿಗೆ ಹೆಚ್ಚಿನ ಆದ್ಯತೆ ಸಿಕ್ಕಾಗ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತದೆ ಹಾಗೂ ಗ್ರಾಮೀಣಾಭಿವೃದ್ಧಿಯನ್ನು ಸಾಧಿಸಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಹೆಚ್ಚಿಸಿ ಮೌಲ್ಯವರ್ಧನೆ ಮಾಡಿದಾಗ ಗ್ರಾಮೀಣಾಭಿವೃದ್ಧಿ ಆಗುತ್ತದೆ. ಈ ಬಜೆಟ್​ನಲ್ಲಿ ಕೃಷಿಗೆ ಮೇಲುನೋಟಕ್ಕೆ ಗಮನಿಸಿದಾಗ ಹೆಚ್ಚಿನ ಆದ್ಯತೆ ಸಿಕ್ಕಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಇನ್ನೂ ಅಭಿವೃದ್ಧಿ ಸಾಧಿಸಬೇಕಾಗಿರುವುದು ಸಾಕಷ್ಟು ಇದೆ. ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸರ್ಕಾರಗಳಿಂದ ಹೆಚ್ಚಾಗಬೇಕಾಗಿದೆ.

    ಮಿತಭಾಷಿ ನಿರ್ಮಲಾ: ಬಜೆಟ್​ ಮಂಡನೆಯಲ್ಲಿ ಕ್ರಮೇಣ ಕಡಿಮೆಯಾದ ಮಾತು; ಯಾವಾಗ ಎಷ್ಟು ಮಾತು?

    ಗಂಡ ಮನೆ ಬಿಟ್ಟು ಹೋಗು ಎಂದಿದ್ದಕ್ಕೆ ಪ್ರಾಣವನ್ನೇ ಬಿಟ್ಟ ಹೆಂಡ್ತಿ; ಮಗ ಪ್ರಯೋಗಕ್ಕೆ ತಂದಿದ್ದ ಕೆಮಿಕಲ್ ಕುಡಿದು ಸತ್ತ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts