ಐದನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಣೆ

ನವದೆಹಲಿ: ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಗುರಿಯೊಂದಿಗೆ ಲೋಕಸಭಾ ಚುನಾವಣೆಯ ಅಖಾಡಕ್ಕೆ ಭಾರಿ ಸಿದ್ಧತೆ ಮಾಡಿಕೊಂಡಿರುವ ಬಿಜೆಪಿ ಶನಿವಾರ ರಾತ್ರಿ ತನ್ನ ಐದನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಷ್ಟ್ರ ರಾಜಧಾನಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಜೆ.ಪಿ.ನಡ್ಡಾ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕರ್ನಾಟಕದ ಕೋಲಾರ ಕ್ಷೇತ್ರಕ್ಕೆ ಮುನಿಸ್ವಾಮಿ ಅವರ ಹೆಸರನ್ನು ಘೋಷಿಸಿದ ನಡ್ಡಾ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ಸುಮಲತಾ ಅಂಬರೀಷ್​ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ಇಂದು 46 ಕ್ಷೇತ್ರಗಳ ಹೆಸರನ್ನು ಬಿಜೆಪಿ ಬಹಿರಂಗಗೊಳಿಸಿದ್ದು, ಉತ್ತರ ಗೋವಾದಿಂದ ಶ್ರೀಪಾದ್​ ನಾಯಕ್​​, ಮಧ್ಯ ಪ್ರದೇಶದ ಮೊರೇನಾದಿಂದ ನರೇಂದ್ರ ಸಿಂಗ್​ ತೋಮಾರ್​, ರೇವಾದಿಂದ ಜನಾರ್ಧನ ಮಿಶ್ರಾ ಹಾಗೂ ಜಬಲ್​ಪುರದಿಂದ ರಾಕೇಶ್​ ಸಿಂಗ್​ ಕಣಕ್ಕಿಳಿಯಲಿದ್ದಾರೆ.

ಹಿಮಾಚಲ ಪ್ರದೇಶದ ಹಮಿರ್​ಪುರ್​ದಿಂದ ಅನುರಾಗ್​ ಠಾಕೂರ್​, ಶಿಮ್ಲಾದಿಂದ ಸುರೇಶ್​ ಕಶ್ಯಪ್​, ಕಾಂಗ್ರದಿಂದ ಕಿಶಾನ್​ ಕಪೂರ್​ ಹಾಗೂ ಜಾರ್ಖಂಡ್​ನ ಗೊಡ್ಡಾದಿಂದ ನಿಶಿಕಾಂತ್​ ದುಬೆ ಸ್ಪರ್ಧೆ ಮಾಡಲಿದ್ದಾರೆ.

ಹಜಾರಿಬಾಗ್​ನಿಂದ ಜಯಂತ್​ ಸಿನ್ಹಾ, ಕುಂತಿ ಕ್ಷೇತ್ರದಿಂದ ಅರ್ಜುನ್​ ಮುಂಡ, ಜಮ್ಶೆಡ್​ಪುರದಿಂದ ವಿದ್ಯುತ್​ ವರಣ್​ ಮಹತೋ, ಧನಬಾದ್​ನಿಂದ ಪಶುಪತಿ ನಾಥ್​ ಸಿಂಗ್​ ಲೋಕಸಭಾ ಅಖಾಡಕ್ಕೆ ಇಳಿಯಲಿದ್ದಾರೆ.

ಕರ್ನಾಟಕದ ಐದು ಅಭ್ಯರ್ಥಿಗಳ ಹೆಸರು ಬಾಕಿ
ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಯಚೂರು, ಚಿಕ್ಕೋಡಿ ಹಾಗೂ ಕೊಪ್ಪಳ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಬಾಕಿ ಉಳಿಸಿಕೊಂಡಿದ್ದು, ಮುಂದಿನ ಪಟ್ಟಿಯಲ್ಲಿ ಹೆಸರು ಘೋಷಿಸುವ ಸಾಧ್ಯತೆ ಇದೆ.

ಬಿಜೆಪಿ ಬಿಡುಗಡೆ ಮಾಡಿರುವ ಐದನೇ ಪಟ್ಟಿ ಹೀಗಿದೆ…

4 Replies to “ಐದನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಣೆ”

  1. ಮಂಡ್ಯ ಕ್ಷೇತ್ರ ಮಾತ್ರ ದೇಶದಲ್ಲೇ ಮನೆ ಮಾತಾಗಬಹುದು. ಪ್ರತಿ ಮಂಡ್ಯದ ಮತದಾರನಿಗೆ, ಇದು ಒಂದು ಧರ್ಮ ಸಂಕಟವೆಂದೇ ಪರಿಗಣಿಸಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಮಂಡ್ಯದ MLAಗಳು ದೊಡ್ಡ ಗೌಡರ JDS ಪಕ್ಷದವರಾಗಿರುತ್ತಾರೆ. ಆದರೆ ಮಂಡ್ಯ ಅಂಬರೀಶ್ ರವರ ತವರಾಗಿದೆ ಮತ್ತು ಮೇಲಾಗಿ ಮಂಡ್ಯದ ಗಂಡೆಂದೇ ಪ್ರಸಿದ್ಧರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸುಮಲತಾರವರಿಗೆ ತಮ್ಮ ನಿಷ್ಠೆಯನ್ನು ತೋರಿಸಬೇಕೋ ? ಇಲ್ಲ ತಮ್ಮ ನಿಷ್ಠೆಯನ್ನು ಗೌಡರಿಗೇ ಮೀಸಲಿಡಬೇಕೋ ? ಇದು ಒಂದು ವಿಕ್ರಂ ಮತ್ತು ಬೇತಾಳದ ಪ್ರಶ್ನೆಯಾಗೇ ಉಳಿಯುವಹಾಗೆ ಕಾಣುತ್ತಿದೆ. ಇಂತಹ ಪರಿಸ್ಥಿತಿಗೆ ಮಂಡ್ಯದ ಮತದಾರರನ್ನು ದೂಡಿದ ವಿಧಿಯನ್ನು ದೂಷಿಸುವುದೋ ? ಇಲ್ಲ ಮಂಡ್ಯದ ಮತದಾರರಿಗೆ ಸರಿಯಾದ ದಾರಿ ಆ ದೇವರೇ ತೋರಿಸಲೆಂದು ಪ್ರಾರ್ಥಿಸಬೇಕಾಗುತ್ತದೆ – ಗುಂಜಮಂಜ (Gunjmanja)

Leave a Reply

Your email address will not be published. Required fields are marked *