ಸಂಭ್ರಮದ ಲಘು ರಥೋತ್ಸವ

blank

ಶಿರೋಳ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಸೋಮವಾರ ಲಘು ರಥೋತ್ಸವ ಸಂಭ್ರಮದಿಂದ ನೆರವೇರಿತು. ಎಡೆಯೂರು ತೋಂಟದ ಸಿದ್ಧಲಿಂಗಸ್ವಾಮೀಜಿಗಳ ಮೂರ್ತಿ, ಬಸವಣ್ಣನವರ ಭಾವಚಿತ್ರ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರು ಮನೆಗಳ ಮುಂದೆ ರಂಗೋಲಿ ಹಾಕಿ ಮೆರವಣಿಗೆಯನ್ನು ಸ್ವಾಗತಿಸಿ ಪಲ್ಲಕ್ಕಿ ಪೂಜೆ ಮಾಡಿದರು.
ಕಲಾ ತಂಡಗಳು, ಹಂಪಸಾಗರ ಪರ್ವತ ಯೋಗ ವ್ಯಾಯಮ ಶಾಲೆ, ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಗುರುಬಸವ ಪ್ರೌಢಶಾಲೆಯ ವಿದ್ಯಾರ್ಥಿಗಳ ಸೇವೆ ರಥೋತ್ಸವದ ಮೆರುಗು ಹೆಚ್ಚಿಸಿದವು. ತೋಂಟದಾರ್ಯ ಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಬಾದಾಮಿಯ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು, ಶಿರೋಳ ಹಿರೇಮಠದ ಅಪ್ಪಯ್ಯ ಹಿರೇಮಠ, ವೀರಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ಜಾತ್ರಾ ಮಹೋತ್ಸವ ಸಮಿತಿಯ ಶಿವಾನಂದ ಯಲಬಳ್ಳಿ, ಶ್ರೀಧರ ಶೀಪ್ರಿ, ಬಸಪ್ಪ ಕುರಿ, ಪರಶುರಾಮ ಮಡಿವಾಳರ, ಗೂಡುಸಾಬ್ ಯಲಿಗಾರ, ಕುಮಾರ ಮರಿಗುದ್ದಿ ,ನಾಗನಗೌಡ್ರ ತಿಮ್ಮನಗೌಡ್ರ, ವೆಂಕಪ್ಪ ಶಾಂತಗೆರಿ, ಶಿದ್ದಪ್ಪ ಸುರೇಬಾನ, ಸಂಗಣ್ಣ ಕಿತ್ತಲಿ, ಮಂಜು ಕವಡಿಮಟ್ಟಿ ಇತರರು ಇದ್ದರು.

Share This Article

ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ತುಪ್ಪವನ್ನು ತಿನ್ನಲೇ ಬಾರದು ಗೊತ್ತಾ? ghee benefits and risks

ಬೆಂಗಳೂರು: ( ghee benefits and risks) ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು.  ತುಪ್ಪ ಹಲವು…

ಬಿಸಿಲಿನ ವಾತಾವರಣದಲ್ಲಿ ನಿಮ್ಮ ಕಾರಿನೊಳಗೆ ತಂಪಾಗಿರಲು ಬಯಸುವಿರಾ? ಈ ಟ್ರಿಕ್ ಟ್ರೈ ಮಾಡಿ.. Summer Car Tips

ಬೆಂಗಳೂರು: (Summer Car Tips ) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿಇಂದ ರಕ್ಷಣೆ ಪಡೆಯಲು…

ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್​ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol

Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್​ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…