ಹುಲಸೂರು: ನವರಾತ್ರಿ ಉತ್ಸವ ನಿಮಿತ್ತ ಬೇಲೂರಿನಲ್ಲಿ ಜೈ ಭವಾನಿ ದೇವಸ್ಥಾನದ ೭೭ನೇ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಭವ್ಯ ಮೆರವಣಿಗೆ ಜರುಗಿತು. ದೇವಸ್ಥಾನ ಎದುರು ಅಂಬಾರಿಯಲ್ಲಿ ಆಸೀನಳಾಗಿದ್ದ ಭವಾನಿ ದೇವಿ ಮೂರ್ತಿಗೆ ಪುಷ್ಪಮಾಲೆ ಮುಖಾಂತರ ಶಾಸಕ ಶರಣು ಸಲಗರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಜೈ ಭವಾನಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ವಿವಿಧ ಬಡಾವಣೆಗಳ ಮೂಲಕ ಮತ್ತೆ ದೇವಸ್ಥಾನಕ್ಕೆ ಕರತರಲಾಯಿತು. ಆನೆ ಮೇಲೆ ಹೊತ್ತು ಅಂಬಾರಿಯನ್ನು ಭಕ್ತಾದಿಗಳು ಕಣ್ಣು ತುಂಬಿಕೊಂಡರು. ಮೈಸೂರು ವೀರಗಾಸೆ ಸಂಘಟನೆ ವೀರಗಾಸೆ ಕುಣಿತ, ಮಹಿಳಾ ಢೋಲ ತಾಸಾ, ತಾಂಬಾಳದ ನಂದಿಕೋಲು, ಬ್ಯಾಂಡ್ ಬಾಜಾ, ಡಿಜೆ ಇತರ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಶೋಭೆ ತಂದವು. ಯುವಕರು ಡಿಜಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಭಕ್ತಾದಿಗಳ ಒತ್ತಾಸೆ ಮೇರೆಗೆ ಶಾಸಕ ಶರಣು ಸಲಗರ ಅವರನ್ನು ಕುದುರೆ ಮೇಲೆ ಕೂಡಿಸಲಾಯಿತು. ಭಕ್ತರಿಗೆ ವಿವಿಧ ಸ್ಥಳಗಳಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಬಾಳೆಹಣ್ಣು ವಿತರಿಸಿದರೆ, ಇನ್ನೂ ಕೆಲವರು ಮಜ್ಜಿಗೆ ಹಾಗೂ ನೀರನ್ನು ವಿತರಿಸುತ್ತಿರುವುದು ಕಂಡುಬಂತು.
ಗಡಿಗೌಡಗಾಂವದ ಶ್ರೀ ಶಾಂತಿವೀರ ಶಿವಾಚಾರ್ಯರು, ಶ್ರೀ ದಾನೇಶ್ವರಿ ತಾಯಿ, ಗ್ರಾಪಂ ಅಧ್ಯಕ್ಷೆ ಕರುಣಾದೇವಿ ಪರೆಪ್ಪ, ಉಪಾಧ್ಯಕ್ಷೆ ಮಲ್ಲಮ್ಮ ಸೋನಕೆರೆ , ಜಾತ್ರಾ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ , ಸಂತೋಷ ಸೇಡೋಳೆ, ರಾಮಲಿಂಗ ಸಾಗವೆ, ಪ್ರಕಾಶ ಮೆಂಡೋಳೆ, ರೇವಣಸಿದ್ದಪ್ಪ ಪಾಟೀಲ್, ಶಾಲಿವಾನ ಸಸಾನೆ, ವೀರಶೆಟ್ಟಿ ಮಲಶೆಟ್ಟಿ, ಸಂತೋಷ ಮಲಶೆಟ್ಟಿ, ಸಂತೋಷ ಚಿಲ್ಲಾಬಟ್ಟೆ, ರವಿ ಚಿಲ್ಲಾಬಟ್ಟೆ, ಬಸವರಾಜ ಗುಂಗೆ ಇತರರು ಪಾಲ್ಗೊಂಡಿದ್ದರು.