ಹೊಳೆನರಸೀಪುರ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ವಿದ್ಯಾಮಾನ್ಯ ತೀರ್ಥರ 19ನೇ ಆರಾಧನಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅನುಕ್ರಮವಾಗಿ ಮಠದಲ್ಲಿ ಪೂರ್ವಾರಾಧನೆ ನಂತರ ಉತ್ತರಾಧನೆಯನ್ನು ಆಚರಿಸಲಾಯಿತು. ಸುಪ್ರಭಾತ, ಪಂಚಾಮೃತ ಅಭಿಷೇಕ, ಫಲಾಮೃತ ಅಭಿಷೇಕ, ಪುಷ್ಪಾಲಂಕಾರದ ಬಳಿಕ ಅಲಂಕಾರ ಸೇವೆ, ಮಹಾಪೂಜೆಯನ್ನು ನೆರವೇರಿಸಲಾಯಿತು.
ಅಂತಿಮವಾಗಿ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಲಾಯಿತು. ಶ್ರೀಮಠದ ವ್ಯವಸ್ಥಾಪಕ ಶ್ರೀಶಾಚಾರ್, ರಮೇಶ್, ಕುಲಕರ್ಣಿ, ಗೋಪಿನಾಥ್, ಕಾರ್ತಿಕ್ ಪೂಜಾ ಕಾರ್ಯಯಲ್ಲಿ ಭಾಗಿಯಾಗಿದ್ದರು.