ಕುಳಗೇರಿ ಕ್ರಾಸ್: ಗ್ರಾಮದ ಭಂಡಾರದೊಡೆಯ ಬೀರೇಶ್ವರನ 66ನೇ ರಥೋತ್ಸವ ಭಾನುವಾರ ಸಂಜೆ ಭಕ್ತರ ಹರ್ಷೋದ್ಗಾರದೊಂದಿ ಸಂಭ್ರಮದಿಂದ ನಡೆಯಿತು.
ಬೆಳಗ್ಗೆಯಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಅಭಿಷೇಕ, ವಿಶೇಷ ಪೂಜೆ ಪುನಸ್ಕಾರ ನೆರವೇರಸಿದರು.
ಜಾತ್ರೆಯಲ್ಲಿ ಭಕ್ತರು ಚೀಲಗಟ್ಟಲೇ ಭಂಡಾರ ಎರಚಿ ಹರಕೆ ತೀರಿಸಿದರು. ಭಕ್ತಿಯಿಂದ ಬೀರೇಶ್ವರನ ತೇರು ಎಳೆದು ಸಂತಸದಿಂದ ಚಪ್ಪಾಳೆ ತಟ್ಟಿ, ಭಕ್ತಿ ಭಾವ ಸಮರ್ಪಿಸಿದರು. ರಥೋತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ಪ್ರತಿ ಮನೆಯ ಮುಂದೆ ಮಹಿಳೆಯರು ರಂಗೋಲಿ ಹಾಕಿ, ಹಸಿರು ತೋರಣಗಳಿಂದ ಮನೆ ಶೃಂಗರಿಸಿದ್ದರು. ಗ್ರಾಮದಲ್ಲಿ ಹಬ್ಬದ ವಾತಾವರಣವೇ ಏರ್ಪಟ್ಟಿತ್ತು.