ಸಂಭ್ರಮದ ಮಹಾಲಕ್ಷ್ಮೀ ದೇವಿ ಜಾತ್ರೆ

ಬೆಳಗಾವಿ: ಉಷಾ ಕಾಲನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 9ನೇ ಜಾತ್ರೆ ಮಹೋತ್ಸವದ ಅಂಗವಾಗಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ದೇವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಯರನಾಳದ ಬ್ರಹ್ಮಾನಂದ ಅಜ್ಜನವರು, ಹೂಲಿಯ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಮತ್ತು ಶಿರಕೋಳದ ಹಿರೇಮಠದ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ 6 ಜೋಡಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಧರ್ಮಸಭೆ ಜರುಗಿತು.

ದೇವಸ್ಥಾನ ಅಭಿವೃದ್ಧಿ ಸಮಿತಿಯ ಧರ್ಮಕರ್ತ ಡಾ.ಪಿ.ಶಿವರಾಮ, ಅಧ್ಯಕ್ಷ ಜೆ.ವಿ.ಹಿರೇಮಠ, ಉಪಾಧ್ಯಕ್ಷ ವೆಂಕಟೇಶ ವತನದಾರ, ಕಾರ್ಯದರ್ಶಿ ಪ್ರಕಾಶ ಹೆಗಡೆ ಇತರರು ಇದ್ದರು. ನಂತರದಲ್ಲಿ ಮಹಾಪ್ರಸಾದ ವಿತರಣೆ ನಡೆಯಿತು.

ಇಂದು ಮೆರವಣಿಗೆ: ಬುಧವಾರ ಮಧ್ಯಾಹ್ನ 3.30ಕ್ಕೆ ರಾಣಿ ಚನ್ನಮ್ಮ ವೃತ್ತದಿಂದ ಮಹಾಲಕ್ಷ್ಮಿದೇವಸ್ಥಾನದ ವರೆಗೆ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಭವ್ಯ ಮೆರವಣಿಗೆಯು ಸಾರೋಟಿನಲ್ಲಿ ನಡೆಯಲಿದೆ. ನಂತರ ಧರ್ಮಸಭೆ ಜರುಗಲಿದೆ.12ಇಮಾಮ್2: ಮಹಾಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು.