ಹುಕ್ಕೇರಿ: ತಾಲೂಕಿನ ಯಾದಗೂಡ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಜರುಗುವ ಲಕ್ಷ್ಮೀದೇವಿ ಜಾತ್ರೆ ಮಾಹೋತ್ಸವ ಸಂಭ್ರಮದಿಂದ ಜರುಗಿತು. ಮಹೋತ್ಸವದ ಅಂಗವಾಗಿ ಹೊನ್ನಾಟ, ದಂಡವತ, ಕೋಣದ ಮೆರವಣಿಗೆ, ಶಾಹಿರಗಾಯನ ಮತ್ತು ವಿವಿಧ ಸ್ಪರ್ಧೆಗಳು ನಡೆದವು.
ಭಾನುವಾರ ಲಕ್ಮೀದೇವಿ ಆರಾಧನೆ, ನೈವೇದ್ಯ, ದೇವಿ ಹೊನ್ನಾಟದ ಬಳಿಕ ಸೀಮೆಗೆ ಕಳುಹಿಸಿದರು. ರಾತ್ರಿ ಶ್ರೀಕೃಷ್ಣ ಪಾರಿಜಾತ ಪ್ರದರ್ಶನದೊಂದಿಗೆ ಜಾತ್ರೆ ಸಂಪನ್ನಗೊಂಡಿತು.