More

  ಆಸ್ಟ್ರೇಲಿಯಾದ ವಿಂಡಮ್‌ನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

  ಮೆಲ್ಬರ್ನ್‌: ನವೆಂಬರ್‌ ಕನ್ನಡ ರಾಜ್ಯೋತ್ಸವ ವರ್ಷವಾಗಿ ಆಚರಿಸುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ರಾಜಧಾನಿ ಮೆಲ್ಬರ್ನ್‌ನ ಒಂದು ಭಾಗವಾಗಿರುವ ವಿಂಡಮ್ ಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರು ಇತ್ತೀಚಿಗೆ ಸಂಭ್ರಮದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

  ಇದನ್ನೂ ಓದಿ: ನಾಯಕಿಯಾಗಿ ಆಲಿಯಾ ಭಟ್​ನ ಬೇಡ ಎಂದಿದ್ದರಂತೆ ಈ ಇಬ್ಬರು ಸ್ಟಾರ್ ನಟರು!; ಕರಣ್​ನಿಂದ ಹೊರಬಿತ್ತು ಅಚ್ಚರಿ ಸಂಗತಿ

  ಕನ್ನಡಿಗರೇ ಸೇರಿ ಸ್ಥಾಪಿಸಿರುವ ವಿಂಡಮ್ ಕನ್ನಡ ಬಳಗ ಸಂಸ್ಥೆಯನ್ನು ಮೂಲಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕನ್ನಡ ಬಳಗವನ್ನು ಕೆಲವು ತಿಂಗಳುಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಆಸ್ಟ್ರೇಲಿಯಕ್ಕೆ ಭೇಟಿ ಕೊಟ್ಟ ವೇಳೆ ಅಧಿಕೃತವಾಗಿ ಉದ್ಘಾಟಿಸಿದ್ದರು.

  ವಿಂಡಮ್ ಕನ್ನಡ ಬಳಗ 2018ರಿಂದ ಮೆಲ್ಬರ್ನ್ ಪಶ್ಚಿಮ ಭಾಗದಲ್ಲಿ ಪ್ರತಿ ವರ್ಷ‌ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದೆ. ಸಂಸ್ಥೆಯು ಅಧಿಕೃತವಾಗಿ ಘೋಷಣೆಯಾದ ಬಳಿಕ ಆಚರಿಸುತ್ತಿರುವ ಮೊದಲ ಕನ್ನಡ ರಾಜ್ಯೋತ್ಸವವನ್ನು ನವಂಬರ್ 18ರಂದು ವಿಲಿಯಂಸ್ಟೌನ್ ಹಾಲ್​ನಲ್ಲಿ ಸುಮಾರು 600 ಹೆಚ್ಚು ಕನ್ನಡಿಗರು ಸೇರಿಕೊಂಡು ವಿಜೃಂಭಣೆಯಿಂದ ಆಚರಿಸಿದರು.

  ಇದನ್ನೂ ಓದಿ: ನ.27 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ

  ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ವಿಂಡಮ್ ಪ್ರದೇಶದ ಕೌನ್ಸಿಲರ್ ಕನ್ನಡತಿ ಸಹನಾ ರಮೇಶ್ ಆಗಮಿಸಿದ್ದರು. ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳು ಹಾಗೂ ಇನ್ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದರು. ಸ್ಪರ್ಧಿಗಳಲ್ಲಿ ಚಿಕ್ಕ ಮಕ್ಕಳ ಸಂಖ್ಯೆ ಹೆಚ್ಚಿದ್ದು, ವಿದೇಶದಲ್ಲಿ ನೆಲೆಸಿರುವ ತಂದೆ ತಾಯಿ, ಪೋಷಕರು ಕನ್ನಡ ಹಾಡುಗಳ ನೃತ್ಯ, ಗಾಯನಕ್ಕೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

  ಈ ಕಾರ್ಯಕ್ರಮದಲ್ಲಿ ವಿಂಡಮ್ ಕನ್ನಡ ಬಳಗದ ಅಧ್ಯಕ್ಷರಾದ ಶ್ರೀಮತಿ ಚೇತನ ಪ್ರಭಾಕರ್ ಉಪಾಧ್ಯಕ್ಷರಾದ ಮುಕುಂದ್ ವೆಂಕಟಾಚಾರ್, ಕಾರ್ಯದರ್ಶಿ ಶ್ರೀಮತಿ ವನಿತಾ ಗಣೇಶ್, ಕೋಶಾಧ್ಯಕ್ಷರಾದ ಅನಿಲ್ ಕುಮಾರ್ ಹಾಗೂ ಗೌರವ ಸದಸ್ಯರಾದ ಗಣೇಶ್ ಉಬರಳೆ ಕೃಷ್ಣಯ್ಯ, ಕೀರ್ತನ್ ರಾವ್ ಸಿಂಧ್ಯೆ, ಪ್ರಭಾಕರ್ ಯಾದವಾಡ್, ರಮೇಶ ರಾಮಕೃಷ್ಣಯ್ಯ, ಶ್ರೀಮತಿ ಕೃಪಾ ಕೃಷ್ಣಪ್ರಸಾದ್, ಶ್ರೀಮತಿ ಉಷಾ ಗೌಡ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದ ನಂತರ ಎಲ್ಲರಿಗೂ ಸಾಂಪ್ರದಾಯಿಕ ಹೋಳಿಗೆ ಊಟ ಏರ್ಪಡಿಸಲಾಗಿತ್ತು.

  ನಾಯಕಿಯಾಗಿ ಆಲಿಯಾ ಭಟ್​ನ ಬೇಡ ಎಂದಿದ್ದರಂತೆ ಈ ಇಬ್ಬರು ಸ್ಟಾರ್ ನಟರು!; ಕರಣ್​ನಿಂದ ಹೊರಬಿತ್ತು ಅಚ್ಚರಿ ಸಂಗತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts