ಮೂಡಲಗಿ: ಪಟ್ಟಣದ ಗಾಂಧಿ ಚೌಕದಲ್ಲಿನ ಶ್ರೀ ಹನುಮಂತ ದೇವರ ಎರಡನೇ ದಿನ ಓಕುಳಿ ಮೂಡಲಗಿಯ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನಮಠದ ಪೀಠಾಧಿಪತಿ ದತ್ತಾತ್ರೇಯಬೋಧ ಸ್ವಾಮೀಜಿ ಮತ್ತು ಶ್ರೀ ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶನಿವಾರ ಸಂಭ್ರಮದಿಂದ ಜರುಗಿತು.
ಬೆಳಗಿನ ಜಾವ ಶ್ರೀ ಹನುಮಂತ ದೇವರ ಮೂರ್ತಿಗೆ ಅಭಿಷೇಕ ವಿಶೇಷ ಪೂಜೆ ಮತ್ತು ಅಲಂಕಾರವನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು.
ಸಂಜೆ ಶ್ರೀಗಳ ಸಾನಿಧ್ಯದಲ್ಲಿ ಜರುಗಿದ ಎರಡನೇ ದಿನ ಕಡೋಕುಳಿಯುಲ್ಲಿ ಯುವಕರು ಪಾಲ್ಗೊಂಡು ನೀರೋಕುಳಿ ಸಂಭ್ರಮಿಸಿದರು. ನಂತರ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಓಕುಳಿ ಕೊಂಡದ ಸುತ್ತ ಐದು ಪ್ರದಕ್ಷಿಣೆ ಹಾಕುವ ಸಮಯದಲ್ಲಿ ಯುವಕರು ದೀರ್ಘದಂಡ ನಮಸ್ಕಾರ ಸೇವೆ ಸಲ್ಲಿಸಿದರು. ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ತೆಂಗಿನ ಕಾಯಿ ಸಮರ್ಪಿಸಿದರು.