ಬಾದಾಮಿ: ಮಾಜಿ ಶಾಸಕ, ವೀರಪುಕೇಶಿ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಎಂ.ಕೆ. ಪಟ್ಟಣಶೆಟ್ಟಿ ಅವರು ತಮ್ಮ 70ನೇ ಜನ್ಮದಿನವನ್ನು ಪತ್ನಿ, ಪುತ್ರರು ಹಾಗೂ ತಾಲೂಕಿನ ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.
ಕುಟುಂಬ ಸಮೇತ ದಕ್ಷಿಣ ಕಾಶಿ ಮಹಾಕೂಟೇಶ್ವರ, ಮದ್ವೀರಶೈವ ಶಿವಯೋಗಮಂದಿರ ಹಾನಗಲ್ ಗುರು ಕುಮಾರೇಶ್ವರ ಮತ್ತು ಸದಾಶಿವ ಮಹಾಸ್ವಾಮಿಗಳ ಗದ್ದುಗೆ ಮತ್ತು ಬನಶಂಕರಿದೇವಿ ದರ್ಶನವನ್ನು ಬುಧವಾರ ಪಡೆದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಕಾರ್ಯಕರ್ತರು, ಅಭಿಮಾನಿಗಳು, ಆಪ್ತರು, ಮುಖಂಡರು, ಬ್ಯಾಂಕಿನ ಸಿಬ್ಬಂದಿ ತಮ್ಮ ನೆಚ್ಚಿನ ನಾಯಕನ ಮನೆಯ ಮುಂದೆ ಆಗಮಿಸಿ ಶುಭಾಶಯ ತಿಳಿಸಿದರು.