ಸಾಧನೆ ಸಂಭ್ರಮಿಸೋಣ ಸೇವೆಗೆ ಅಣಿಯಾಗೋಣ

blank

ಮೊನ್ನೆಯಷ್ಟೇ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಬಂದಿತು. ಈ ಫಲಿತಾಂಶ ತಂದ ಸಂತಸ ಮತ್ತು ಸಂದೇಶ ಅನೂಹ್ಯ. ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯ ಪ್ರತಿಭೆಗಳು ಈ ಬಾರಿಯ ಸಾಧಕರಲ್ಲಿ ಸ್ಥಾನ ಪಡೆದರು. ಇದು ನಿಜವಾದ ಸಾಧನೆ. ಈ ಸಾಧಕರ ಹಿನ್ನೆಲೆ ಮತ್ತು ಗುರಿಯತ್ತ ಒಮ್ಮೆ ಚಿತ್ತ ಹರಿಸಿದರೆ ಸಿಗುವುದು ಸ್ಪೂರ್ತಿಯ ಸೆಲೆಯೇ.

blank

ಈ ಬಾರಿ ಉತ್ತಮ ಸಾಧಕರ ಪಟ್ಟಿ ಮತ್ತು ಅವರ ಹಿನ್ನೆಲೆ ಬಹಳ ಕುತೂಹಲಕಾರಿಯಾಗಿತ್ತು. ಕೆಲವರು ರಂಗ ಚಟುವಟಿಕೆ ನಿರತರಾಗಿದ್ದರೆ, ಇನ್ನು ಹಲವರು ಬೇರೆ ಬೇರೆ ವೃತ್ತಿಯಲ್ಲಿದ್ದುಕೊಂಡು ಈ ಪರೀಕ್ಷೆ ಕಟ್ಟಿದ್ದರು. ಶಿವಮೊಗ್ಗದ ಬಿ.ಎಂ. ಮೇಘನಾ ಹಾಗೂ ರಾಣೆಬೆನ್ನೂರು ತಾಲೂಕು ಕೋಡಿಯಾಲ ಹೊಸಪೇಟೆಯ ಇಟ್ಟಿಗೆ ಭಟ್ಟಿ ಮಾಲೀಕರ ಮಗ ಡಾ. ಸಚಿನ್ ಗುತ್ತೂರ ಅವರ ಸಾಧನೆ ಗಮನಾರ್ಹವಾಗಿತ್ತು. ಇನ್ನು ಬೆಳಗಾವಿ ಜಿಲ್ಲೆಯ ಭೀರಪ್ಪ ಡೋಣಿ ಕುರಿ ಕಾಯುತ್ತಲೇ ಯುಪಿಎಸ್​ಸಿಯಲ್ಲಿ 551 ನೇ ರ್ಯಾಂಕ್ ಪಡೆದರು.

ಇಂದಿಗೂ ತಮ್ಮ ಹಿರಿಯರ ಜೀವನೋಪಾಯದ ವೃತ್ತಿಯ ಬಗ್ಗೆ ಹೆಮ್ಮೆ ಪಡುವ ಮತ್ತು ತಾನೂ ಅದನ್ನು ಮಾಡುವ ಇವರ ಕಾರ್ಯವೈಖರಿ ನಿಜಕ್ಕೂ ಅನುಕರಣೀಯ. ಮೂರನೇ ಪ್ರಯತ್ನದಲ್ಲಿ ಗುರಿ ತಲುಪಿದ ಭೀರಪ್ಪ ಇಂದು ಮನೆಮಾತಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಪಾಂಡುರಂಗ ಸದಾಶಿವ ಕಂಬಳಿ 529ನೇ ರ್ಯಾಂಕ್ ಪಡೆದಿದ್ದಾರೆ. ಪಾಡುರಂಗ ಅವರು ಕಳೆದ ಒಂದು ವರ್ಷದಿಂದ ಐಎಫ್​ಎಸ್​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಮಾಡುತ್ತಲೇ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಪಾಡುರಂಗ ಅವರು ಐದನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.

ಪಾಂಡುರಂಗ ಕಂಬಳಿ ಓರ್ವ ರೈತರ ಪುತ್ರರಾಗಿದ್ದಾರೆ. ಇನ್ನು ಸತತ 4ನೇ ಪ್ರಯತ್ನ ಮಾಡಿ ಕೊನೆಗೆ ಯಶಸ್ಸನ್ನು ತನ್ನದಾಗಿಸಿಕೊಂಡ ಸಚಿನ್ ಗುತ್ತೂರ ಅವರ ಸಾಧನೆ ಹಿಂದೆ ಹೆತ್ತವರ ಪೋ›ತ್ಸಾಹ ಮತ್ತು ಸಹೋದರನ ಸಹಕಾರದ ಅಂಶ ತಿಳಿದು ಬಂದಿದೆ. ಇದು ಅವರ ಯಶಸ್ಸಿನ ಗುಟ್ಟು. ಇನ್ನು ಕೆಲವರು ನನಗೆ ಹಳ್ಳಿಯಲ್ಲಿ ಸೇವೆ ಮಾಡುವ ಆಸೆ ಎಂದು ಹೇಳಿಕೊಂಡಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಏಕೆಂದರೆ ಅಧಿಕಾರ ಸಿಕ್ಕರೆ ಎಸಿ ರೂಂನಲ್ಲಿ ಕುಳಿತು ಹುದ್ದೆಯನ್ನು ಎಂಜಾಯ್ ಮಾಡಬೇಕೆನ್ನುವವರ ಮಧ್ಯೆ ಸೇವಾ ಮನೋಭಾವ ಇಟ್ಟುಕೊಂಡವರೂ ಇದ್ದಾರೆ ಎನ್ನುವುದು ವಿಶೇಷವೇ ಸರಿ. ಇಲ್ಲಿ ಇನ್ನೊಂದು ವಿಷಯ ಎಂದರೆ ಈ ಸಾಧಕರ ಶಿಸ್ತು ಮತ್ತು ಯೋಜನಾಬದ್ಧ ಅಭ್ಯಾಸದ ವೇಳಾಪಟ್ಟಿ. ಕೆಲವರು ದಿನಕ್ಕೆ 6 ಗಂಟೆ ಓದಿದರೆ ಇನ್ನಷ್ಟು ಜನ 8ರಿಂದ 10 ತಾಸು ಓದುವ ಕ್ರಮ ರೂಢಿಸಿಕೊಂಡಿದ್ದರು.

ಕಲಿಸಿದ ವಿಷಯಗಳ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಹೊಂದಲು ವಿಷಯಗಳನ್ನು ಸಂಪೂರ್ಣವಾಗಿ ಮತ್ತು ಆಳವಾಗಿ ವಿಶ್ಲೇಷಿಸಲು ಪ್ರಯತ್ನಿಸಬೇಕು. ಅಂದಾಗ ಗೆಲುವಿನ ದಡ ಸೇರುವುದು ಖಚಿತ. ಓದಿನ ಬಿಡುವಿನ ಮಧ್ಯೆ ತನ್ನಿಷ್ಟದ ಆರೋಗ್ಯಕರ ಹವ್ಯಾಸಗಳನ್ನು ಕೈಗೊಂಡಾಗ ಮಾನಸಿಕ ಒತ್ತಡ ಕ್ಷೀಣಿಸುತ್ತದೆ. ಮನಸ್ಸು ಹಗುರಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದು ಕೂಡ ಮುಖ್ಯ. ಉತ್ತರ ಪ್ರದೇಶದ ಪ್ರಯಾಗರಾಜ್​ನ ಶಕ್ತಿ ದುಬೆ ಅವರು ಇಡೀ ದೇಶಕ್ಕೆ ಪ್ರಥಮರಾಗಿ ಉತ್ತೀರ್ಣರಾಗಿದ್ದಾರೆ. ಕೇಂದ್ರ ಲೋಕಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಪ್ರತಿಯೊಬ್ಬರ ಕನಸಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಪೋಷಕರು ಸಹ ಇದನ್ನು ಎದುರು ನೋಡುತ್ತಾರೆ. ಇಂತಹ ಆಸೆಗಳನ್ನು ಇಟ್ಟುಕೊಂಡಿರುವ ಪರೀಕ್ಷಾರ್ಥಿಗಳು ಇತರ ಯಾವುದೇ ಪರೀಕ್ಷೆಯಂತೆ ಇದನ್ನೂ ಗಂಭೀರ ಪರೀಕ್ಷೆಯಾಗಿ ತೆಗೆದುಕೊಂಡು ಸಿದ್ಧರಾಗಬೇಕು. ಅಧ್ಯಯನ ಮುಖ್ಯ ಆದರೆ, ಅದರೊಂದಿಗೆ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಇತರ ಆಯ್ಕೆಗಳ ಬಗ್ಗೆಯೂ ಯೋಚಿಸಬೇಕು ಮತ್ತು ಅದಕ್ಕೆ ಸಿದ್ಧರಾಗಬೇಕು. ಯುಪಿಎಸ್​ಸಿ ಪರೀಕ್ಷೆಯೇ ಎಲ್ಲವೂ ಅಲ್ಲ. ಅದೇ ಬದುಕೂ ಅಲ್ಲ ಎಂಬ ಶಕ್ತಿ ದುಬೆಯ ಕಿವಿಮಾತಿನ ಹಿಂದೆ ಬಹಳಷ್ಟು ಸಂದೇಶ ಮತ್ತು ಅರ್ಥವಿದೆ.

ಈ ಎಲ್ಲ ಸಾಧಕರ ಹಿಂದೆ ಹೆತ್ತವರ ಆಶೀರ್ವಾದದ ಬಲ ತುಂಬಾ ಇರುತ್ತದೆ. ಹಾಗಂತ ಇವರ ಯತ್ನ ಇರುವುದಿಲ್ಲವಂತಲ್ಲ. ಆ ಯತ್ನಕ್ಕೆ ಹಾರೈಕೆಯ ಬಲ ತುಂಬಿದಾಗ ಫಲ ಬರುತ್ತದೆ. ಇದನ್ನು ಸಾಧಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಮಗನ ಜೀವನ ಈ ಹಂತದವರೆಗೆ ಬಂದು ತಲುಪುವಷ್ಟರಲ್ಲಿ ಅವರು ತಮ್ಮ ಜೀವನ ಸವೆಸಿರುತ್ತಾರೆ. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕೇ ಹೊರತು ‘ಮೈ ಲವ್ ಈಸ್ ಮೈ ಲೈಫ್’ ಎಂದು ಇದೀಗ ಜತೆಯಾದವರ ಹೆಸರನ್ನಷ್ಟೇ ಹೇಳುವುದಲ್ಲ.

ಈ ಭಾಷೆ ಮಾತಾಡು! ಇಲ್ಲ ಅಂದ್ರೆ… ಪಿಜ್ಜಾ ಪಡೆದು ಹಣ ಕೊಡದೆ ಡೆಲಿವರಿ ಬಾಯ್​ ಕಳಿಸಿದ ದಂಪತಿ; ವಿಡಿಯೋ ವೈರಲ್​ | Delivery Agent

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank