ಗುಳೇದಗುಡ್ಡ: ತಾಲೂಕಿನ ಎಲ್ಲ ಸರ್ಕಾರಿ ಕಚೇರಿ, ಶಾಲೆ ಕಾಲೇಜುಗಳಲ್ಲಿ ಶ್ರೀ ಕನಕದಾಸರ ಭಾವಚಿತ್ರ ಪೂಜಿಸಿ, ಜಯಂತಿ ಕಾರ್ಯಕ್ರಮ ಆಚರಿಸಬೇಕೆಂದು ತಹಸೀಲ್ದಾರ್ ಮಂಗಳಾ ಎಂ. ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಶ್ರೀ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಹಾನ್ ಸಂತನಿಗೆ ಗೌರವ ಸಲ್ಲಿಸಬೇಕು ಎಂದರು.
ಸಮಾಜದ ಮುಖಂಡರು ಮಾತನಾಡಿ, ಸಮಾಜದ ವತಿಯಿಂದ ಅದ್ದೂರಿಯಾಗಿ ಕನಕದಾಸರ ಜಯಂತಿ ಆಚರಿಸಲಾಗುವುದೆಂದು ತಿಳಿಸಿದರು.
ಕೃಷಿ ಅಧಿಕಾರಿ ಆನಂದಗೌಡರ, ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ಗ್ರೇಡ್ 2 ತಹಸೀಲ್ದಾರ್ ಮುನ್ನಾ ರಜಪೂತ, ಸಿಆರ್‌ಪಿ ಜೆ.ಎಂ. ಬುಳ್ಳಾ, ಎಂ.ಸಿ. ನಲವತ್ತವಾಡ, ಬಿ.ಎನ್. ಆಲೂರ, ಆರ್.ಕೆ. ಮೊಕಾಶಿ, ಎಸ್.ವೈ. ಗುಡ್ಡದ, ಎಚ್.ಆರ್. ಮುತ್ತಲಗೇರಿ, ಎನ್.ಎ. ಕೊಲ್ಹಾಪೂರಕರ, ಗೋಪಾಲ ಜಕ್ಕಪ್ಪನವರ, ಮಲ್ಲೇಶ ಹಿರೇದ್ಯಾವಪ್ಪನವರ. ಬಿ.ಎಚ್. ಗೋಡಿ ಮತ್ತಿತರರಿದ್ದರು.