ನ್ಯೂಜಿಲೆಂಡ್​ ವಿರುದ್ಧ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತಕ್ಕೆ ಸೋಲು

ಹ್ಯಾಮಿಲ್ಟನ್​: ನ್ಯೂಜಿಲೆಂಡ್​ ವಿರುದ್ಧದ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ 4 ರನ್​ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಇದರೊಂದಿಗೆ 2-1 ಅಂತರದಿಂದ ಸರಣಿ ಸೋಲನುಭವಿಸಿತು.
ಟಾಸ್​ ಗೆದ್ದರೂ ಭಾರತ ಮೊದಲು ಫೀಲ್ಡಿಂಡ್​ ಆಯ್ದುಕೊಂಡಿತು. 20 ಓವರ್​ಗಳಲ್ಲಿ ನ್ಯೂಜಿಲೆಂಡ್​ 4 ವಿಕೆಟ್​ ನಷ್ಟಕ್ಕೆ 212 ರನ್​ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 208 ರನ್​ ಗಳಿಸಲಷ್ಟೇ ಶಕ್ತವಾಯಿತು.