ಕವಿತಾಳ: ಅಮೀನಗಡ ಸರ್ಕಾರಿ ಪ್ರೌಢಶಾಲೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಸೋಮವಾರ ಚಾಲನೆ ನೀಡಿದರು.
ಕೆಲ ತಿಂಗಳ ಹಿಂದೆ ಶಾಲೆಯ ಎಸ್‌ಡಿಮ್‌ಸಿ ಅಧ್ಯಕ್ಷ, ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮವೊಂದರಲ್ಲಿ ಶಾಸಕರಿಗೆ ಸಿಸಿ ರಸ್ತೆ ನಿರ್ಮಿಸುವಂತೆ ಮನವಿಪತ್ರ ಸಲ್ಲಿಸಿದ್ದರು.
ಇದನ್ನು ಓದಿ:ಉದ್ಯೋಗ ಖಾತ್ರಿ ಕಾಮಗಾರಿಗಳ ಪರಿಶೀಲನೆ
ಕರ್ನಾಟಕ ಯೋಜನೆಯ 2023-24ನೇ ಸಾಲಿನ ಅಡಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆಗೆ ಚಾಲನೆ ನೀಡಿ, ನೀಡಿದ ಭರವಸೆಯಂತೆ ಸಿಸಿ ರಸ್ತೆಯನ್ನು ಮಾಡಲಾಗಿದೆ ಎಂದರು. ತುಗ್ಗಲದಿನ್ನಿ ಕ್ಯಾಂಪ್, ಗುಡಿಹಾಳ ಆನಂದಗಲ್, ಢೋಣಮರಡಿ, ಮೈಬೂಬನಗರ ಕ್ಯಾಂಪ್‌ನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.