ನಾಮಫಲಕಕ್ಕೆ ಸೀಮಿತವಾದ ಸಿಸಿ ಚರಂಡಿ

blank

ಕಾಮಗಾರಿ ಮಾಡದೆಯೇ ನರೇಗಾ ಹಣ ಗುಳುಂ?, ಸುಮಾರು 3 ಲಕ್ಷ ರೂ. ಅವ್ಯವಹಾರ

ಲಕ್ಕೂರು: ನರೇಗಾ ಯೋಜನೆಯಡಿ ಸಿಸಿ ಚರಂಡಿ ನಿರ್ಮಿಸಲಾಗಿದೆ ಎಂಬ ಕಾಮಗಾರಿ ವಿವರದ ಮಾಹಿತಿ ಫಲಕವನ್ನು 2021ರಲ್ಲೇ ಅಳವಡಿಸಿ, ಚರಂಡಿ ನಿರ್ಮಾಣ ಕಾಮಗಾರಿ ಮಾಡದಿದ್ದರೂ ನರೇಗಾ ಹಣವನ್ನು ಲಪಟಾಯಿಸಿದ್ದಾರೆ ಎಂದು ಕೋಡಿಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.


ಮಾಲೂರು ತಾಲೂಕು ಲಕ್ಕೂರು ಹೋಬಳಿಯ ಕೋಡಿಹಳ್ಳಿ ಮುಖ್ಯರಸ್ತೆಯ ಒಂದು ಭಾಗದಲ್ಲಿ ಸಿಸಿ ಚಂರಡಿ ನಿರ್ಮಿಸಲು ನರೇಗಾ ಯೋಜನೆಯಡಿ 2021ರಲ್ಲಿ ಪಿಡಿಒ ಲೋಕೇಶ್​ ಹಾಗೂ ತಾಂತ್ರಿಕ ವಿಭಾಗದ ಹರೀಶ್​ಕುಮಾರ್​ ಆದೇಶ ನೀಡಿ, ಹಣವನ್ನು ಬಿಡುಗಡೆ ಮಾಡಿದ್ದರು. ಆದರೆ ಇದುವರೆಗೂ ಚರಂಡಿಯನ್ನೇ ನಿರ್ಮಿಸಿಲ್ಲ. ಆದರೆ ಚರಂಡಿ ನಿರ್ಮಾಣ ಮಾಡಿದಂತೆ ಕೂಲಿ ಹಣವನ್ನು 28 ನರೇಗಾ ಉದ್ಯೋಗ ಕಾರ್ಡ್​ಗಳ ಬ್ಯಾಂಕ್​ ಖಾತೆಗೆ ರೂ.43,657 ರೂ. ವರ್ಗಾಯಿಸಿ ಅವ್ಯವಹಾರ ಎಸಗಲಾಗಿದೆ ಎನ್ನಲಾಗಿದೆ. ಸುಮಾರು 3 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆದಿರುವ ಕುರಿತು ರಸ್ತೆ ಪಕ್ಕದಲ್ಲಿ ನಾಮಫಲಕ ಹಾಕಿದ್ದಾರೆ. 2021ರ ನವೆಂಬರ್​ 8ರಂದು ಕೋಡಿಹಳ್ಳಿಯ ಸರ್ಕಾರಿ ಶಾಲೆಯ ಮುಂಭಾಗದಿಂದ ಸುಮಾರು 300 ಮೀಟರ್​ ಸಿಸಿ ಚರಂಡಿ ನಿರ್ಮಾಣ ಕೆಲಸಗಳಿಗೆ ತಾಂತ್ರಿಕ ಮಂಜೂರಾತಿಯೂ ದೊರೆತಿದೆ. ಸಿ.ಸಿ ಚರಂಡಿ ಶಾರ್ಪ್​ಚಾರ್​ ಅಳವಡಿಸಿ, ತಾಂತ್ರಿಕ ಮಂಜೂರಾತಿಯನ್ನು ಅಧಿಕಾರಿ ಹರೀಶ್​ ಕುಮಾರ್​ ಎಲ್​.ವಿ.(ಟಿಸಿ) ನೀಡಿದ್ದು, ಕಾಮಗಾರಿ ಆಗಿದೆಯೇ?, ಇಲ್ಲವೇ? ಎಂದು ಪರಿಶೀಲಿಸದೆ ಸಂಪೂರ್ಣ ಹಣವನ್ನು ನುಂಗಿ ಹಾಕಿದ್ದಾರೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ.

ಕೆರೆಯಾಗಿ ಮಾರ್ಪಟ್ಟ ರಸ್ತೆ : ಚರಂಡಿ ನಿರ್ಮಿಸದೆ ಇರುವುದರಿಂದ ನಿತ್ಯ ಕೊಳಚೆ ರಸ್ತೆಯ ಮೇಲೆ ಹರಿಯುತ್ತಿದೆ. ಅಲ್ಲದೆ, ರಸ್ತೆಯಲ್ಲಿ ಟಿಪ್ಪರ್​ ಲಾರಿ ಸಂಚರಿಸುವುದರಿಂದ ರಸ್ತೆ ಸಂಪೂರ್ಣ ಕಿತ್ತು, ಗುಂಡಿಗಳು ನಿರ್ಮಾಣವಾಗಿ ಒಡಾಟ ಮಾಡಲು ತೊಂದರೆಯಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಪಾದಚಾರಿಗಳಿಗೆ ನಿತ್ಯ ಕೆಸರಿನ ಮಜ್ಜನವಾಗುತ್ತಿದೆ. ಮನೆಗಳ ಕೊಳಚೆ ನೀರು ರಸ್ತೆಯ ಮೇಲೆ ಹರಿದು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಗಬ್ಬುನಾತ ಬೀರುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.


ಲಕ್ಕೂರು ಸಮೀಪದ ಎಸ್​ಟಿಆರ್​ಆರ್​ ರಸ್ತೆಯನ್ನು ನಿರ್ಮಿಸುತ್ತಿರುವ ಕಾರಣ ಅತಿ ಭಾರ ಹೊತ್ತ ಟಿಪ್ಪರ್​ ವಾಹನಗಳು ರಸ್ತೆ ನಿರ್ಮಾಣಕ್ಕೆ ಮಣ್ಣು ತುಂಬಿಕೊಂಡು ಓಡಾಟ ಮಾಡುತ್ತಿವೆ. 2021ರಲ್ಲಿ ಕೋಡಿಹಳ್ಳಿ ರಸ್ತೆಯ ಅಕ್ಕಪಕ್ಕ ಚರಂಡಿ ನಿರ್ಮಿಸಲು ಸರ್ಕಾರದಿಂದ ಅನುಮೋದನೆ ನೀಡಿ ಅಂದಾಜು 3 ಲಕ್ಷ ರೂ. ನರೇಗಾ ಯೋಜನೆಯಡಿ ನೀಡಿತ್ತು. ಹಿಂದಿನ ಪಿಡಿಒ ಲೋಕೇಶ್​ ಚರಂಡಿ ಕಾಮಗಾರಿ ಮಾಡದೆ ಬಿಲ್​ ಮಾಡಿಕೊಂಡು ಅಕ್ರಮವೆಸಗಿದ್ದಾರೆ. ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು.

ಕೆ.ಶ್ರೀನಿವಾಸ್​ ಕೋಡಿಹಳ್ಳಿ ನಿರ್ದೇಶಕರು, ಕೃಷಿ ಪತ್ತಿನ ಸಹಕಾರ ಸಂಘ

ಐಷರಾಮಿ ಕಾರುಗಳಲ್ಲಿ ಪ್ರಯಾಣಿಸುವ ಯಾವೊಬ್ಬ ಜನಪ್ರತಿನಿಧಿಯು ರಸ್ತೆ ಹಾಳಾಗಿರುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳಲ್ಲಿ ನೀರು ತುಂಬಿಕೊಂಡರೆ ರಸ್ತೆ ಯಾವುದೆಂದೇ ತಿಳಿಯುವುದಿಲ್ಲ. ದ್ವಿಚಕ್ರ ವಾಹನ ಸವಾರರು ನೀರು ತುಂಬಿರುವ ರಸ್ತೆಯಲ್ಲಿ ಹೊಂಡ ಯಾವುದು, ರಸ್ತೆ ಯಾವುದು ಎಂದು ತಿಳಿಯದೆ ನೀರಿನಲ್ಲಿ ಬಿದ್ದು ಕೈಕಾಲು ಮರಿದುಕೊಂಡಿದ್ದಾರೆ.

ಎಲ್​.ಎಂ.ರಮೇಶ್​
ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂದ ಅಧ್ಯಕ್ಷ

ಕೆಲಸದ ಎಸ್ಟಿಮೆಟ್​, ಎನ್​ಎಂಆರ್​ ಹಾಗೂ ಕಾಮಗಾರಿಯ ಫೈಲ್​ ತರಿಸಿ ಪರಿಶೀಲಿಸಲಾಗುವುದು. ಕೆಲಸ ಮಾಡದೆ ಪೇಮೆಂಟ್​ ಮಾಡಲು ಸಾಧ್ಯವಿಲ್ಲ. ಪರಿಶೀಲಿಸಿ ವಿವರ ನೀಡಲಾಗುವುದು.

ಕೃಷ್ಣಪ್ಪ ತಾಪಂ ಇಒ

Share This Article

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…