ವಾಟ್ಸ್​ಆ್ಯಪ್​ನಲ್ಲಿ ಲೀಕ್​ ಆಯ್ತು ಸಿಬಿಎಸ್​ಇ ಅಕೌಂಟೆನ್ಸಿ ಪ್ರಶ್ನೆಪತ್ರಿಕೆ

ನವದೆಹಲಿ: ಸಿಬಿಎಸ್​ಇ ಹನ್ನೆರಡನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆಪತ್ರಿಕೆಯು ಗುರುವಾರ ಬೆಳಗ್ಗೆ ವಾಟ್ಸ್​ ಆ್ಯಪ್​ನಲ್ಲಿ ಹರಿದಾಡುತ್ತಿರುವುದು ತಿಳಿದುಬಂದಿದೆ.

ಇಂದು ದೇಶದಾದ್ಯಂತ ಸಿಬಿಎಸ್​ಇ ಅಕೌಂಟೆನ್ಸಿ ಪರೀಕ್ಷೆ ನಡೆದಿದ್ದು, ಸೋರಿಕೆಯಾಗಿರುವ ಪ್ರಶ್ನೆಪತ್ರಿಕೆಯು ಬೋರ್ಡ್​ನ ಎರಡನೇ ಸೆಟ್​ ಗೆ ಹೋಲಿಕೆಯಾಗುತ್ತಿದೆ ಎನ್ನಲಾಗಿದೆ. ತಜ್ಙರ ಆಯೋಗವು ಇದರ ಬಗ್ಗೆ ತನಿಖೆ ನಡೆಸಲಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸಲಿದೆ ಎಂದು ಸಿಬಿಎಸ್​ಇ ತಿಳಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಟ್ವೀಟ್​ ಮಾಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ, ‘ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣಕರ್ತರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕು’ಎಂದಿದ್ದಾರೆ.

ಮಾರ್ಚ್​5 ರಿಂದ ಸಿಬಿಎಸ್​ಇ ಬೋರ್ಡ್ನ 12ನೇ ತರಗತಿ ಪರೀಕ್ಷೆ ಆರಂಭವಾಗಿದೆ.
(ಏಜೆನ್ಸೀಸ್​)

Leave a Reply

Your email address will not be published. Required fields are marked *