More

    ಸಿಬಿಎಸ್​ಇ ಪರೀಕ್ಷೆಗೆ ಶೇ. 75 ಹಾಜರಾತಿ ಕಡ್ಡಾಯ

    ನವದೆಹಲಿ: ಈ ವರ್ಷ ನಡೆಯುವ ಕೇಂದ್ರೀಯ ಮಾಧ್ಯಮಿಕ ಪರೀಕ್ಷಾ ಮಂಡಳಿಯ (ಸಿಬಿಎಸ್​ಇ) 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಶೇ. 75 ಹಾಜರಾತಿ ಹೊಂದಿರುವುದು ಕಡ್ಡಾಯ. ಅದಕ್ಕಿಂತ ಕಡಿಮೆ ಹಾಜರಿ ಇರುವವರಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ.

    2020ರ ಜನವರಿ ಒಂದಕ್ಕೆ ಅನ್ವಯವಾಗುವಂತೆ ಹಾಜರಾತಿ ಲೆಕ್ಕ ಹಾಕಲು ಮಂಡಳಿಯು ಇತ್ತೀಚಿನ ನೋಟಿಸ್​ನಲ್ಲಿ ಶಾಲೆಗಳಿಗೆ ಸೂಚಿಸಿದೆ. ಸಿಬಿಎಸ್​ಇ ಬೋರ್ಡ್ ಪರೀಕ್ಷೆಗಳು ಫೆ. 15ರಂದು ಆರಂಭವಾಗಲಿವೆ. ಕಡ್ಡಾಯ ಹಾಜರಾತಿ ಪ್ರಮಾಣ ಸೇರಿ ವಿವಿಧ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪತ್ರ (ಅಡ್ಮಿಟ್ ಕಾರ್ಡ್) ನೀಡಲಾಗುತ್ತದೆ. ಕಡಿಮೆ ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳು ಸಕಾರಣ ತಿಳಿಸಿ ಅದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಜನವರಿ 7 ರೊಳಗೆ ಸಲ್ಲಿಸಲು ಮಂಡಳಿ ಅವಕಾಶ ಕಲ್ಪಿಸಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts