ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡಿದರೆ ಡ್ಯಾಂಗೆ ಕಂಟಕ ಎಂದ ತಜ್ಞರು

ಮೈಸೂರು:‌ ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯ (ಕೆಆರ್​ಎಸ್​) ಸಮೀಪ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡುವ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ಮೈಸೂರಿನ ಇಂಜಿನಿಯರ್​ಗಳು ವಿರೋಧ ವ್ಯಕ್ತಪಡಿಸಿದ್ದು, ಈ ಪ್ರತಿಮೆಯಿಂದ ಡ್ಯಾಂಗೆ ಕಂಟಕ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನ.16ರಂದು ಇನ್​ಸ್ಟಿಟ್ಯೂಟ್​ ಆಫ್​ ಇಂಜಿನಿಯರ್ಸ್​ ​ನಲ್ಲಿ ಸಭೆ ನಡೆಸಿ ಪ್ರತಿಮೆ ನಿರ್ಮಾಣದಿಂದ ಆಗುವ ಸಾಧಕ-ಬಾಧಕಗಳನ್ನು ಚರ್ಚೆ ಮಾಡಿರುವ ಇಂಜಿನಿಯರ್​ಗಳು ಕಾವೇರಿ ಪ್ರತಿಮೆ ಬೇಡವೆಂದು ಇಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.

ಕಾವೇರಿ ಪ್ರತಿಮೆ ನಿರ್ಮಾಣ ಮಾಡಲು ಕನಿಷ್ಠ 30 ಅಡಿ ಆಳದ ಗುಂಡಿ ತೆಗೆಯಬೇಕು. ಡಿಸ್ನಿಲ್ಯಾಂಡ್​ ಪಾರ್ಕ್​ ಮಾದರಿಯಲ್ಲಿ ಉದ್ಯಾನ ಮಾಡಿದರೆ 400 ಎಕರೆ ರೈತರ ಕೃಷಿ ಭೂಮಿ ಹಾಳಾಗುತ್ತದೆ. ಅಲ್ಲದೆ, ಅದಕ್ಕೆ 4 ಟಿಎಂಸಿ ನೀರು ಬೇಕಾಗುತ್ತದೆ. ರಾಜ್ಯ ಸರ್ಕಾರ ಯಾರೊಂದಿಗೂ ಚರ್ಚೆ ಮಾಡದೆ ನಿರ್ಧಾರ ತೆಗೆದುಕೊಂಡಿದೆ. ಇದನ್ನು ವಿರೋಧಿಸಿ ಮನವಿ ಸಲ್ಲಿಸಲಾಗುವುದು ಎಂದು ಇಂಜಿನಿಯರ್​ಗಳು ಹೇಳಿದ್ದಾರೆ.

ಕೆಆರ್​ಎಸ್​ ಬಳಿ ಕಾವೇರಿ ಮಾತೆಯ 125 ಅಡಿ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ರಾಜ್ಯಸರ್ಕಾರ