More

    ಕಾವೇರಿ ನದಿ ಸ್ವಚ್ಛತೆಗೆ ಅಭಿಯಾನ

    ನಾಪೋಕ್ಲು: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ನದಿ ಮಲಿನವಾಗುತ್ತಿದ್ದು ನದಿ ಸ್ವಚ್ಛತಾ ಅಭಿಯಾನಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ.ಹಂಸ ಕೊಟ್ಟಮುಡಿ ಹೇಳಿದರು.


    ಹೊದ್ದೂರು ಗ್ರಾಮ ಪಂಚಾಯಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಂಜೀವಿನಿ ಒಕ್ಕೂಟದಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು.


    ಹೊದ್ದೂರು ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಮಲಿನವಾಗುತ್ತಿದೆ. ಪ್ರವಾಸಿಗರು, ಜನರು ತ್ಯಾಜ್ಯವನ್ನು ತಂದು ಕಾವೇರಿ ನದಿ ತಟದಲ್ಲಿ ಸುರಿಯುತ್ತಿದ್ದಾರೆ. ಇದರಿಂದ ನದಿಯ ಜತೆಗೆ ಪರಿಸರವೂ ಮಲಿನಗೊಳ್ಳುತ್ತಿದೆ. ಹಾಗಾಗಿ ನದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು ಹೇಳಿದರು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್ ಮಾತನಾಡಿ, ಸ್ವಚ್ಛತಾ ಸೇವಾ ಯೋಜನೆಯಡಿ ಕಾವೇರಿ ನದಿ ಸಂರಕ್ಷಣೆ ಉದ್ದೇಶ ಹೊಂದಿದ್ದೇವೆ. ಪ್ರಜ್ಞಾವಂತ ನಾಗರಿಕರು ಕಾವೇರಿ ನದಿ ಮಲೀನವಾಗದಂತೆ ನೋಡಿಕೊಳ್ಳಬೇಕು. ನದಿ ಪಕ್ಕದಲ್ಲಿ ತ್ಯಾಜ್ಯ ಎಸೆಯಬಾರದು ಎಂದರು.


    ವಿವಿಧ ಸಂಘಟನೆಗಳು, ಸಾರ್ವಜನಿಕರು ನಾಪೋಕ್ಲು ಕೊಟ್ಟಮುಡಿ ಸೇತುವೆಯಿಂದ ಹೊದ್ದೂರು ಗ್ರಾಮ ಪಂಚಾಯಿತಿವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು.
    ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅನುರಾಧಾ, ಸದಸ್ಯರಾದ ವಾಂಚಿರ ಅಜಯ್ ಕುಮಾರ್, ಸರಸು, ಕುಸುಮಾವತಿ, ಚೌರೀರ ಅನಿತಾ, ಚೌರೀರ ನವೀನ್, ಕೆ.ಆರ್.ಅನಿತಾ, ಮೈದು ಕೊಟ್ಟಮುಡಿ, ಪಾರ್ವತಿ, ಲಕ್ಷ್ಮೀ, ಕಡ್ಲೆರ ಟೈನಿ, ಪಿಡಿಒ ಅಬ್ದುಲ್ಲಾ, ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ಪಾಟೀಲ್, ಮೊಣ್ಣಪ್ಪ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts