ಗುಜರಾತಿನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ; ಓರ್ವ ಮೃತ್ಯು

ಅಹಮದಾಬಾದ್: ನಿರ್ಮಾಣ ಹಂತದ ಮೇಲ್ಸೇತುವೆಯೊಂದು ಕುಸಿದು ಬಿದ್ದು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಗುಜರಾತಿನ ಭನಸ್​ಕಾಂತ ಜಿಲ್ಲೆ ಪಲನ್​ಪುರದಲ್ಲಿ ನಡೆದಿದೆ. ಬ್ರಿಡ್ಜ್​ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕಳಪೆ ಕಾಮಗಾರಿ ಸೇತುವೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಸೇತುವೆ ನಿರ್ಮಾಣ ಹಂತದಲ್ಲಿತ್ತು. ಪಲನ್​ಪುರದಿಂದ ಅಂಬಾಜಿಗೆ ಸೇತುವೆ ಸಂಪರ್ಕ ಕಲ್ಪಿಸುತ್ತಿತ್ತು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಸೇತುವೆ ಅಡಿ ಹಲವರು ಸಿಲುಕಿರುವ ಶಂಕೆ … Continue reading ಗುಜರಾತಿನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ; ಓರ್ವ ಮೃತ್ಯು