Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಭೂತಕಾಲವನ್ನು ಮರೆಯಬಾರದು. ಅಂದಿನ ನೋವಿನಿಂದಲೇ ಇಂದಿನ ಬಲ ಬಂದಿದ್ದು. ಆಗಿನ ಭಯದಿಂದಲೇ ಧೈರ್ಯ ಗಳಿಸಿಕೊಂಡಿದ್ದು, ಇಂದಿನ ಫಲದ ಮೂಲವೇ ಅದು!

ಲಾಲಿಸಿದ ತಾಯಿ, ಮುದ ನೀಡುವ ಮಗಳು, ಸುಖ, ದುಃಖಗಳಲ್ಲಿ ಭಾಗಿಯಾಗುವ ಹೆಂಡತಿ ಇವರನ್ನೆಲ್ಲ ಗೌರವಿಸುವುದು ನಿತ್ಯ ನೇಮವಾಗಬೇಕು!

ಸಂಬಂಧಗಳ ವಿವರಣೆಯೆಂದರೆ ನಾವೇನು ಕೊಟ್ಟೆವು, ಎಷ್ಟು ತೆಗೆದುಕೊಂಡೆವು, ಆಡಿದ ಮಾತುಗಳೇನು ಎಂಬುದಲ್ಲ. ಗಳಿಸಿದ ಗೌರವ, ವಿಶ್ವಾಸಗಳೆಷ್ಟು ಎಂಬುದು !

ಐಶ್ವರ್ಯ, ಅಧಿಕಾರದ ಆಸೆ, ಪ್ರೇಮ, ದ್ವೇಷ ಇವೆಲ್ಲ ಅವಶ್ಯಕತೆಗಿಂತ ಹೆಚ್ಚಾದರೆ ವಿಷ. ಪ್ರತಿ ಸಂಗತಿಯೂ ಮಿತಿಯಲ್ಲಿದ್ದರೆ ಅದೇ ಅಮೃತ!

 

ಪ್ರತಿ ಕ್ಷಣವೂ ಒಂದು ಸವಾಲು. ಪ್ರತಿ ಸವಾಲೂ ಒಂದು ಅವಕಾಶ. ಪ್ರತಿ ಅವಕಾಶವೂ ಗುರಿಯತ್ತ ಸಾಗಲು ಸಹಾಯಕವೇ!

ಆಡುವ ಮಾತುಗಳಿಗಿಂತ ಆಡದೆ ಉಳಿದ ಮೌನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದಾಗ ಸಂಬಂಧಗಳು ಮತ್ತಷ್ಟು ಮಧುರವಾಗಿ ಗಟ್ಟಿಗೊಳ್ಳುತ್ತವೆ!

ಇಷ್ಟಪಡುವುದಕ್ಕೂ ಪ್ರೀತಿಸುವುದಕ್ಕೂ ವ್ಯತ್ಯಾಸವಿದೆ. ಇಷ್ಟಪಟ್ಟ ಹೂವೊಂದನ್ನು ನಿಜವಾಗಿ ಪ್ರೀತಿಸಲು ಸಾಧ್ಯವಾಗುವುದು ಆ ಗಿಡಕ್ಕೆ ನೀರೆರೆದು ಪೋಷಿಸಿದಾಗ ಮಾತ್ರ!

ಯಾರೂ ಹುಟ್ಟುವಾಗಲೇ ಸ್ನೇಹಿತರೂ ಅಲ್ಲ, ವೈರಿಗಳೂ ಅಲ್ಲ. ನಮ್ಮ ಧೋರಣೆಗಳ ಮೂಲಕ ಎದುರಿಗಿರುವ ಯಾರನ್ನಾದರೂ ಸ್ನೇಹಿತರನ್ನಾಗಿಸಿಕೊಳ್ಳಲು ಸಾಧ್ಯವಿದೆ!

ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ!

ಜೀವನ ನಾವಂದುಕೊಂಡಷ್ಟು ಕಷ್ಟವಲ್ಲ. ಬೇಡದ ಅನೇಕ ಸಂಗತಿಗಳನ್ನು ದಾಸ್ತಾನು ಮಾಡಿಕೊಂಡು ಗೋಜಲು ಮಾಡಿಕೊಂಡಿರುತ್ತೇವೆ. ಅಗತ್ಯಕ್ಕೆ ತಕ್ಕಷ್ಟೇ ಸಂಗ್ರಹಿಸುತ್ತ ಸುಖ ಹೊಂದಬಹುದು!

Back To Top