ಅರವಿಂದ ಅಕ್ಲಾಪುರ ಶಿವಮೊಗ್ಗ
ಜಾತಿ, ರಾಜಕೀಯ ಎಂಬುದು ಎಲ್ಲೆಡೆ ವ್ಯಾಪಿಸಿರುವಾಗ ಪದೋನ್ನತಿಯಂತಹ ಸಂಗತಿಗಳು ಇದರಿಂದ ಹೊರತಾಗಿರಲು ಸಾಧ್ಯವೇ? ಖಂಡಿತಾ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಸಿಮ್ಸ್ (ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ)ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು.
ಇಎನ್‌ಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಒಬ್ಬರ ವಾರ್ಷಿಕ ಕಾರ್ಯನಿರ್ವಹಣಾ ವರದಿಯಲ್ಲಿ ತೃಪ್ತಿಕರ ಎಂದು ನಮೂದಾಗದಿದ್ದರೂ ಅಂಥವರ ಸೇವೆಯನ್ನು ಉತ್ತಮ ಎಂದು ಪರಿಗಣಿಸಿ ಪ್ರೊಫೆಸರ್ ಹುದ್ದೆಗೆ ಪದನ್ನೋತಿ ನೀಡಲು ಮುಂದಾಗಿರುವುದರ ಹಿಂದೆ ಜಾತಿ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ರಾಜಕೀಯ ಶಕ್ತಿಯೂ ಜತೆಯಾಗಿದೆ.
ಪ್ರಾಧ್ಯಾಪಕರೊಬ್ಬರ ನಿವೃತ್ತಿಯಿಂದಾಗಿ ಕಳೆದ 9 ತಿಂಗಳಿನಿಂದಲೂ ಖಾಲಿ ಉಳಿದಿರುವ ಸ್ಥಾನಕ್ಕೆ ಅರ್ಹತೆ ಮೇಲೆ ಮುಂಬಡ್ತಿ ಪಡೆಯಲು ಇಬ್ಬರ ನಡುವೆ ತುರುಸಿನ ಸ್ಪರ್ಧೆಯಿದೆ. ಆದರೆ ವಾರ್ಷಿಕ ಕಾರ್ಯನಿರ್ವಹಣಾ ವರದಿ ಆಧಾರದಲ್ಲಿ ನ್ಯಾಯಯುತವಾಗಿ ಫ್ರೊಫೆಸರ್ ಹುದ್ದೆಗೇರಲು ಅರ್ಹತೆ ಇರುವವರಿಗೆ ರಾಜಕೀಯ ಲಾಬಿ ಅಡ್ಡಿಯಾಗಿದೆ.
ಕೆಸಿಎಸ್‌ಆರ್ ಪಾಲನೆಯಿಲ್ಲ: ಈಗ ಸಿಮ್ಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಕೆಸಿಎಸ್‌ಆರ್(ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ) ಪಾಲನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ ಪದೋನ್ನತಿ ನೀಡುವಾಗ ಪಾಲನೆಯಾಗಬೇಕಾದ ಅಂಶಗಳ ಬಗ್ಗೆ ಕೆಸಿಎಸ್‌ಆರ್‌ನಲ್ಲಿ ಸ್ಪಷ್ಟ ನಿರ್ದೇಶನಗಳಿವೆ.
2001ರ ಸರ್ಕಾರಿ ಆದೇಶದ ಪ್ರಕಾರ ವಾರ್ಷಿಕ ಕಾರ್ಯನಿರ್ವಹಣಾ ವರದಿ ನಮೂನೆಯಲ್ಲಿ ನಿಗದಿಪಡಿಸಲಾದ ಸಾಮಾನ್ಯ ಮೌಲ್ಯಮಾಪನದ ಐದು ಶ್ರೇಣಿಗಳಲ್ಲಿ ಉತ್ತಮ ಸಾಧನೆ ಮಾಡಿರಬೇಕು. ಇದರಲ್ಲಿ ಅಸಾಧಾರಣ, ಅತ್ಯುತ್ತಮ, ಉತ್ತಮ. ಸಾಧಾರಣ, ಸಾಧಾರಣಕ್ಕಿಂತ ಕಡಿಮೆ ಎಂದು ಶ್ರೇಯಾಂಕ ನಿಗದಿಪಡಿಸಲಾಗಿದೆ.
ಸಾಧಾರಣ ಹಾಗೂ ಸಾಧಾರಣಕ್ಕಿಂತ ಕಡಿಮೆ ಎಂದು ಕಾರ್ಯನಿರ್ವಹಣಾ ವರದಿಯಲ್ಲಿ ನಮೂದಾಗಿದ್ದರೆ ಅಂತಹ ನೌಕರನ ಸೇವೆ ಅತೃಪ್ತಿಕರವೆಂದೇ ಭಾವಿಸಬೇಕು. ಕೆಸಿಎಸ್‌ಆರ್ ನಿಯಮಾವಳಿ ಪ್ರಕಾರ ಸಾರ್ವಜನಿಕ ಹಿತಾಸಕ್ತಿ ಅನ್ವಯ ಅಂತಹ ನೌಕರನನ್ನು ಕಡ್ಡಾಯ ನಿವೃತ್ತಿಗೆ ಶಿಫಾರಸು ಮಾಡಬೇಕು. ಆದರೆ ಈಗ ಕಾರ್ಯನಿರ್ವಹಣಾ ವರದಿಯಲ್ಲಿ ಕನಿಷ್ಠ ಸಾಧನೆ ತೋರಿದವರಿಗೆ ಪ್ರಾಧ್ಯಾಪಕ ಸ್ಥಾನಕ್ಕೆ ಬಡ್ತಿ ನೀಡಲು ತೆರೆಮರೆಯ ಕಸರತ್ತು ನಡೆಯುತ್ತಿರುವುದು ಸಿಮ್ಸ್‌ನಲ್ಲಿ ಸದ್ದು ಮಾಡುತ್ತಿದೆ.
ವರದಿ ಬಂದರೂ ಕ್ರಮವಿಲ್ಲ: ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ 2018ರಿಂದ ಈಚೆಗೆ ಬಡ್ತಿ ನೀಡುವ ಸಂದರ್ಭದಲ್ಲಿ ಇ-ಪಿಎಆರ್ ಪದ್ಧತಿ ಅಳವಡಿಸಲಾಗಿದೆ. ಈ ಹಿಂದೆ ಲಿಖಿತವಾಗಿ ನೀಡುತ್ತಿದ್ದ ಕಾರ್ಯನಿರ್ವಹಣಾ ವರದಿಯನ್ನು ಇ-ವ್ಯವಸ್ಥೆ ಮೂಲಕ ನೀಡಲಾಗುತ್ತಿದೆ. ಇದು ಇಲಾಖೆಯ ವಿವಿಧ ಹಂತಗಳಲ್ಲಿ ಅನುಮೋದನೆಗೊಂಡು ಅಂತಿಮವಾಗಿ ಬಡ್ತಿ ನೀಡುವ ಇಲ್ಲವೇ, ಹಿಂಬಡ್ತಿ ನೀಡುವ ಬಗ್ಗೆ 45 ದಿನಗಳೊಳಗೆ ಶಿಫಾರಸು ಮಾಡಬೇಕು. ಆದರೆ ಜೂ.6ರ ವರದಿಯಲ್ಲಿ ಸಾಧಾರಣಕ್ಕಿಂತ ಕಡಿಮೆ, ಜು.17ರ ವರದಿಯಲ್ಲಿ ಸಾಧಾರಣಕ್ಕಿಂತ ಕಡಿಮೆ ಎಂದು ನಮೂದಿಸಿದ್ದರೂ ಇದುವರೆಗೂ ಕಳಪೆ ಸಾಧನೆ ತೋರಿದ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ಮೂಡಿಸಿದೆ.
ಕಾನೂನು ಹೋರಾಟಕ್ಕೆ ಸಿದ್ಧತೆ:ಅರ್ಹತೆ ಇದ್ದರೂ ನನಗೆ ಪ್ರಾಧ್ಯಾಪಕ ಸ್ಥಾನ ಸಿಗುವುದಿಲ್ಲ. ಜಾತಿ, ರಾಜಕೀಯ ಲಾಬಿಯಿಂದ ನನಗೆ ಅನ್ಯಾಯವಾಗಲಿದೆ ಎಂಬ ಅಭಿಪ್ರಾಯಕ್ಕೆ ಬಂದಿರುವವರು, ಒಂದು ವೇಳೆ ನಿಜವಾಗಿಯೂ ನನಗೆ ಅನ್ಯಾಯವಾದರೆ ಕಾನೂನು ಹೋರಾಟಕ್ಕೆ ಸಿದ್ಧ ಎಂದು ಆತ್ಮೀಯರ ಬಳಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಪ್ರಾಧ್ಯಾಪಕ ಸ್ಥಾನಕ್ಕೆ ಬಡ್ತಿ ನೀಡುವ ವಿಚಾರ ಕೋರ್ಟ್ ಮೆಟ್ಟಿಲೇರಿದರೆ ವಿದ್ಯಾರ್ಥಿಗಳಿಗೆ ನಿಜಕ್ಕೂ ತೊಂದರೆಯಾಗಲಿದೆ. ಮುಖ್ಯವಾಗಿ ಸಿಮ್ಸ್‌ನ ಇಎನ್‌ಟಿ ವಿಭಾಗದ ಮೇಲೂ ದುಷ್ಪರಿಣಾಮ ಬೀರಲಿದೆ. ಯಾರೋ ಒಬ್ಬರ ಹಿತಾಸಕ್ತಿ, ಜಾತಿ ಪ್ರಾಬಲ್ಯ ಸ್ಥಾಪಿಸುವುದಕ್ಕಾಗಿ ಸಂಸ್ಥೆಯ ಹಿತ ಬಲಿ ಕೊಟ್ಟಂತಾಗುತ್ತದೆ.
ಮುಂದಿನ ಸಮಸ್ಯೆಗಳೇನು?:ಈಗ ಅನರ್ಹ ವ್ಯಕ್ತಿಗೆ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಸ್ಥಾನಕ್ಕೆ ಬಡ್ತಿ ನೀಡಿದರೆ ಅರ್ಹತೆ ಇದ್ದ ವ್ಯಕ್ತಿ ಕೋರ್ಟ್ ಮೆಟ್ಟಿಲೇರುತ್ತಾರೆ. ಅಲ್ಲಿ ಸರ್ಕಾರದ ಬಡ್ತಿ ಆದೇಶಕ್ಕೆ ತಡೆ ಬೀಳಬಹುದು. ಆದರೆ ಕಾನೂನಾತ್ಮಕವಾಗಿ ಪ್ರಕರಣ ಇತ್ಯರ್ಥಕ್ಕೆ ವಿಳಂಬವಾಗುವ ಸಾಧ್ಯತೆಗಳಿವೆ. ಈಗಾಗಲೇ ಕಳೆದ 9 ತಿಂಗಳಿನಿಂದ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಸ್ಥಾನ ಖಾಲಿ ಉಳಿದಿದೆ. ಇದುವರೆಗೂ ಪ್ರಾಧ್ಯಾಪಕರ ನೇಮಕ ಮಾಡದಿರುವುದು ಹಾಗೂ ಇದು ಕಾನೂನಾತ್ಮಕ ಹೋರಾದ ಹಾದಿ ಹಿಡಿಯುವುದರಿಂದ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಮುಂದಿನ ದಿನಗಳಲ್ಲಿ ಇಎನ್‌ಟಿ ವಿಭಾಗದ ಪಿಜಿ ಸೀಟುಗಳನ್ನೇ ತಿರಸ್ಕರಿಸುವ ಸಾಧ್ಯತೆಗಳೂ ಇರುತ್ತವೆ.
ಬಡ್ತಿಗಾಗಿ ಜಾತಿ-ರಾಜಕೀಯ ಲಾಬಿ?!
You Might Also Like
ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್ ವಿಧಾನ | Health Tips
10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…
ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars
Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…
ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್ ಮಾಡೋದೆ ಇಲ್ಲ | Health Tips
ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…