ಅಧಿಕಾರಕ್ಕೆ ಬಂದರೆ ರೈತರ ಕೇಸ್ ವಾಪಸ್

ಗಂಗಾವತಿ(ಕೊಪ್ಪಳ): ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಲಕ್ಷ ಕೋಟಿ ರೂ. ಅನುದಾನ ಮೀಸಲಿಡಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಭತ್ತ ಬೆಳೆಗಾರರೊಂದಿಗೆ ಮಂಗಳವಾರ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿದ್ದು, ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದೇ ದೊಡ್ಡ ಸಾಧನೆ. ನಿತ್ಯ 12 ಗಂಟೆ ವಿದ್ಯುತ್ ಪೂರೈಸುವುದಾಗಿ ಹೇಳಿ, ಅಧಿಕಾರ ಸಿಕ್ಕ ನಂತರ ಮರೆತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ತಿಂಗಳೊಳಗೆ ರೈತರ ಮೇಲಿನ ಎಲ್ಲ ಪ್ರಕರಣ ಹಿಂಪಡೆಯಲಾಗುವುದು. 3 ತಿಂಗಳೊಳಗೆ ನಿತ್ಯ 12 ಗಂಟೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ನೀರು ನಿರ್ವಹಣೆಯಲ್ಲಿ ಎಡವಿದ್ದರಿಂದ ಕಾಲುವೆ ವ್ಯಾಪ್ತಿಯ ರೈತರಿಗೆ ತೊಂದರೆಯಾಗಿದ್ದು, ನೀರಿದ್ದರೂ ರೈತರಿಗೆ ನೀರು ದೊರಕದ ಸ್ಥಿತಿ ನಿರ್ವಣವಾಗಿದೆ. ರೈತರ ಹಿತಕ್ಕಾಗಿ 5000ಕೋಟಿ ರೂ. ಆವರ್ತ ನಿಧಿ ಸ್ಥಾಪಿಸಲಾಗುವುದು. ಮಾರುಕಟ್ಟೆ ಭದ್ರತಾ ಯೋಜನೆ ಜಾರಿಗೊಳಿಸಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ರಾಜಕಾರಣಕ್ಕಾಗಿ ಪ್ರವಾಸ ಹಾಕಿಕೊಂಡಿಲ್ಲ, ಭತ್ತದ ಬೆಳೆಗಾರರೊಂದಿಗೆ ಬಿಜೆಪಿಯಿದ್ದು, ಬಾಸುಮತಿ ಅಕ್ಕಿಗೆ ದೊರೆತಂತೆ ಸೋನಾಮಸೂರಿಗೆ ಭೌಗೋಳಿಕ ಸೂಚ್ಯಂಕ ದೊರಕಿಸಲು ಪ್ರಧಾನಿ ಜತೆ ರ್ಚಚಿಸಲಾಗುವುದು ಎಂದರು.

ಫಸಲ್ ಭೀಮಾ ಯೋಜನೆ ನೀರಾವರಿ ವ್ಯಾಪ್ತಿಯ ಕೃಷಿಗೂ ವಿಸ್ತರಿಸುವಿರಾ ಎಂದು ರೈತ ಮುಖಂಡ ಯಮನಪ್ಪ ವಿಠಲಾಪುರ ಕೇಳಿದ ಪ್ರಶ್ನೆಗೆ, ಪ್ರಧಾನಿ ನರೇಂದ್ರ ಮೋದಿ ಜತೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ನೀರಾವರಿ ಸಮಸ್ಯೆಗಳ ಯೋಜನೆ ರೂಪಿಸಲು ಮೇಲ್ಮನೆಯಲ್ಲಿ ರೈತರ ಹೋರಾಟಗಾರರಿಗೆ ಆದ್ಯತೆ ನೀಡುವಿರಾ ಎಂಬ ಸೋಮನಾಥ ಹಳವಾಳ ಪ್ರಶ್ನೆಗೆ ಉತ್ತರಿಸಿ, ಆದ್ಯತೆ ನೀಡಲು ಯತ್ನಿಸಲಾಗುವುದು ಎಂದರು. ಸಮಾನಾಂತರ ಜಲಾಶಯಕ್ಕಿಂತ ನದಿ ಜೋಡಣೆಗೆ ಆದ್ಯತೆ ನೀಡುವಿರಾ ಎಂಬ ಸತ್ಯನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿ, ನೀರಾವರಿ ತಜ್ಞರೊಂದಿಗೆ ರ್ಚಚಿಸಿ ನದಿ ಜೋಡಣೆಗೆ ಆದ್ಯತೆ ನೀಡಲಾಗುವುದು. ನವಲಿ ಭಾಗದಲ್ಲಿ ಸಮಾನಾಂತರ ಜಲಾಶಯಕ್ಕೆ ಅನುದಾನ ಮೀಸಲಿಡಲಾಗುವುದು ಎಂದರು.

ರೈತರ ಪಾಲಿಗೆ ರಾಜ್ಯ ಸರ್ಕಾರ ಸತ್ತು ಹೋಗಿದ್ದು, ರೈತರ ಹಿತ ಕಾಯುವ ಕೃಷಿ ನೀತಿಯನ್ನು ಕಾಂಗ್ರೆಸ್ ಕಡೆಗಣಿಸಿದೆ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಭದ್ರತಾ ವೈಫಲ್ಯ

ಭದ್ರತಾ ವೈಫಲ್ಯದಿಂದಾಗಿ ಯಡಿಯೂರಪ್ಪ 20 ನಿಮಿಷ ಹೆಲಿಕಾಪ್ಟರ್​ನಲ್ಲೇ ಇರುವಂತಾಯಿತು. ಗಂಗಾವತಿ ಎಪಿಎಂಸಿ ಪ್ರಾಂಗಣದ ತಾಲೂಕು ಕ್ರೀಡಾಂಗಣದಲ್ಲಿ ಕಾಪ್ಟರ್ ಲ್ಯಾಂಡ್ ಆಗಲು ಸೂಚನೆ ನೀಡುವ ಅಗ್ನಿಶಾಮಕ ದಳದ ಗ್ಯಾಸ್ ಸಕಾಲಕ್ಕೆ ಮೇಲ್ಮಟ್ಟದಲ್ಲಿ ಉರಿಯಲಿಲ್ಲ. ಹೀಗಾಗಿ ಕಾಪ್ಟರ್ ಒಂದು ಸುತ್ತು ಹಾಕಿ ನೇರ ಲ್ಯಾಂಡ್ ಆಗುವ ಸ್ಥಳಕ್ಕೆ ಬಂತು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರಿಂದ ಕೆಳಮಟ್ಟದಲ್ಲಿ ಜೋತು ಬೀಳುತ್ತಿರುವ ಕಾಪ್ಟರ್ ರೆಕ್ಕೆಗಳಿಂದ ಕಾರ್ಯಕರ್ತರಿಗೆ ತೊಂದರೆಯಾಗಬಹುದೆಂದು ಚಾಲಕ ಕಾಪ್ಟರ್ ಬಂದ್ ಮಾಡಲಿಲ್ಲ. ಜನರನ್ನು ಚದುರಿಸುವಂತೆ ಚಾಲಕ ಮಾಹಿತಿ ನೀಡಿದರೂ ಪೊಲೀಸ್ ಸಿಬ್ಬಂದಿ ಕೊರತೆಯಿಂದ ನೂಕು ನುಗ್ಗಲು ನಿಯಂತ್ರಿಸಲಾಗಲಿಲ್ಲ. ಕೊನೆಗೂ ಗಣ್ಯರೇ ಕಾರ್ಯಕರ್ತರನ್ನು ನಿಯಂತ್ರಿಸಿದರು.

12ಕ್ಕೆ 2ನೇ ಪಟ್ಟಿ?

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಏ.12ಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಬುಧವಾರ ಸಂಜೆ ಅಥವಾ ಗುರುವಾರ ಬೆಳಗ್ಗೆ ಈ ಕುರಿತು ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ನಂತರ ನವದೆಹಲಿಯಲ್ಲಿ ಸುಮಾರು 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.


ಅಧಿಕಾರಿಗಳ ಕಿರುಕುಳ, ದೂರು

ಬೆಂಗಳೂರು: ರಾಜ್ಯದಲ್ಲಿ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿ ಯುತ ಚುನಾವಣೆ ನಡೆಯುವಂತಾಗಲು ಮತ್ತು ಚುನಾವಣಾ ಪ್ರಚಾರಕ್ಕೆ ಅಧಿಕಾರಿಗಳಿಂದ ಆಗುತ್ತಿರುವ ತೊಂದರೆ ತಪ್ಪಿಸಿ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ.

ಆಯೋಗದ ಕಚೇರಿಗೆ ಭೇಟಿ ನೀಡಿದ ಪ್ರಕಾಶ್ ಜಾವಡೇಕರ್ ನೇತೃತ್ವದ ನಿಯೋಗ, ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಜತೆ ಮಾತುಕತೆ ನಡೆಸಿತು. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆರ್. ಅಶೋಕ್, ದೇವಾಲಯಗಳಲ್ಲಿ ಧ್ವಜಗಳನ್ನು ತೆಗೆಸುತ್ತಿರುವುದು, ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಗಡಿಪಾರು ಮಾಡುತ್ತಿರುವುದು ಸೇರಿ ಅನೇಕ ವಿಚಾರಗಳನ್ನು ಗಮನಕ್ಕೆ ತರಲಾಯಿತು. ದೇವಾಲಯಗಳಲ್ಲಿ ಧ್ವಜ ತೆಗೆಸಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕಾರ್ಯಕರ್ತರ ಗಡಿಪಾರು ಕುರಿತು ಚರ್ಚೆ ನಡೆಸಲಾಗುವುದು ಎಂದಿದ್ದಾರೆ. ಕಾಂಗ್ರೆಸ್ ತಮಗೆ ಬೇಕಾದವರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿ ಪ್ರಚಾರಕ್ಕೆ ಅಡ್ಡಿಯುಂಟು ಮಾಡಿ, ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವುದನ್ನು ಆಯೋಗದ ಗಮನಕ್ಕೆ ತರಲಾಗಿದೆ ಎಂದರು.

ನಾಳೆ ಹುಬ್ಬಳ್ಳಿಯಲ್ಲಿ ಷಾ ಪ್ರತಿಭಟನೆ

ಬೆಂಗಳೂರು: ಕರುನಾಡ ಜಾಗೃತಿ ಯಾತ್ರೆ ಪ್ರಯುಕ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಏ. 12-13ಕ್ಕೆ ಉತ್ತರ ಕರ್ನಾಟಕ ಪ್ರವಾಸ ನಡೆಸಲಿದ್ದಾರೆ. ಏ.11ರ ರಾತ್ರಿ ಹುಬ್ಬಳ್ಳಿಗೆ ಆಗಮಿಸಲಿರುವ ಷಾ, ಅಲ್ಲೇ ತಂಗಲಿದ್ದಾರೆ. ಏ.12ರಿಂದ 2 ದಿನ ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದ್ದಾರೆ. ರಾಜ್ಯ ಸರ್ಕಾರ ವೀರಶೈವ ಲಿಂಗಾಯತ, ಅಲ್ಪಸಂಖ್ಯಾತ ಬಹುಸಂಖ್ಯಾತ ಹೆಸರಿನಲ್ಲಿ ವಿಭಜನೆ ನಡೆಸುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿರá-ವ ಸತ್ಯಾಗ್ರಹದಲ್ಲಿ ಬೆ.11ರಿಂದ 12ರವರೆಗೆ ಅಮಿತ್ ಷಾ ಭಾಗಿಯಾಗಲಿದ್ದಾರೆ.

 

Leave a Reply

Your email address will not be published. Required fields are marked *