ಧಾರವಾಡ: ಕೋವಿಡ್-19 ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕರ್ಫ್ಯೂ ಸೇರಿ ಹಲವಾರು ನಿರ್ಬಂಧಗಳನ್ನು ವಿಧಿಸಿರುವ ರಾಜ್ಯ ಸರ್ಕಾರ ಮದುವೆ ಮುಂತಾದ ಸಮಾರಂಭಗಳಿಗೂ ಜನರನ್ನು ಸೀಮಿತಗೊಳಿಸಿ ಸೂಚನೆ ನೀಡಿದೆ. ಅದಾಗ್ಯೂ ಅಧಿಕ ಜನರನ್ನು ಸೇರಿಸಿ ಮದುವೆ ಮಾಡಿದ್ದಕ್ಕೆ ಕಲ್ಯಾಣ ಮಂಟಪದ ಮಾಲೀಕರಿಗೆ ಕೇಸು ಜಡಿಯಲಾಗಿದೆ.
ಧಾರವಾಡದ ರಾಯಲ್ ಕಮ್ಯುನಿಟಿ ಹಾಲ್ನಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಮದುವೆ ನಡೆದಿದೆ. ಭೀಮಪ್ಪ ಬಾಂಬೆ ಎಂಬವರ ಕುಟುಂಬಕ್ಕೆ ಸೇರಿದ್ದ ಮದುವೆ ಇದಾಗಿದ್ದು, ಆರಂಭದಲ್ಲಿ 100 ಜನರನ್ನಷ್ಟೇ ಸೇರಿಸಲಾಗುವುದು ಎಂದು ಅನುಮತಿ ಪಡೆಯಲಾಗಿತ್ತು. ಆದರೆ ಬಳಿಕ 200 ಜನರು ನೆರೆದಿದ್ದರಿಂದ, ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಪಾಲಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಮದುವೆ ಮನೆ ಮುಖಂಡ ಹಾಗೂ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಪ್ರಿಯಕರನನ್ನು ಹುಡುಕಿಕೊಂಡು ರಾತ್ರಿಯೇ ಆತನ ಮನೆಗೆ ಹೋದ ಪ್ರೇಯಸಿ; ಆ ನಂತರ ನಡೆದಿದ್ದಂತೂ ಬೆಚ್ಚಿಬೀಳಿಸುವಂಥದ್ದು!