ಹುಬ್ಬಳ್ಳಿ: ಏಕಸ್ ಸಂಸ್ಥೆಯ ಚೇರ್ಮನ್ ಅರವಿಂದ ಮೆಳ್ಳಿಗೇರಿ ಅವರಿಗೆ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರದಾನ ಹಾಗೂ ಸೆಂಟರ್ ಫಾರ್ ಅಟೋಮೇಶನ್ ಆಂಡ್ ರೊಬೊಟಿಕ್ಸ್ ರೀಸರ್ಚ್ (ಸಿಎ ಆರ್ ಆರ್) ಉದ್ಘಾಟನೆ ಸಮಾರಂಭ ಡಿ. 18ರಂದು ಮಧ್ಯಾಹ್ನ 12ಕ್ಕೆ ನಗರದ ಕೆಎಲ್ಇ ಟೆಕ್ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.
ಕೆಎಲ್ಇ ತಾಂತ್ರಿಕ ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅವರು ಪದವಿ ಪ್ರದಾನ ಮಾಡುವರು. ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಕುಲಪತಿ ಡಾ. ಪ್ರಕಾಶ ತೆವರಿ, ಕುಲಸಚಿವ ಡಾ. ಬಸವರಾಜ ಅನಾಮಿ, ಇತರರು ಪಾಲ್ಗೊಳ್ಳುವರು.