More

  ಕಾರ್ಲ್ಸ್ ಬರ್ಗ್ ಸಂಸ್ಥೆಯಿಂದ ನಂಜನಗೂಡಿನಲ್ಲಿ ಜಲ ಮರುಪೂರಣ ಕಾರ್ಯ

  ಮೈಸೂರು: ಕಾರ್ಲ್ಸ್ ಬರ್ಗ್ ಇಂಡಿಯಾ ಮತ್ತು ವಾಟರ್ ಏಡ್ ಇಂಡಿಯಾ ವತಿಯಿಂದ ನಂಜನಗೂಡು ತಾಲೂಕಿನ 5 ಗ್ರಾಮ ಪಂಚಾಯಿತಿಗಳಲ್ಲಿ ಜಲ ಮರುಪೂರಣ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಲ್‌ಬರ್ಗ್ ಇಂಡಿಯಾ ಉಪಾಧ್ಯಕ್ಷ ರಿಷಿ ಚಾವ್ಲಾ ಹೇಳಿದರು.

  ತಗಡೂರು, ಕಾರ್ಯ, ದೇವನೂರು, ಬದನವಾಳು ಮತ್ತು ನೇರಳೆ ಐದು ಗ್ರಾಮ ಪಂಚಾಯಿತಿಗಳ 34 ಸಾವಿರಕ್ಕೂ ಹೆಚ್ಚು ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಸುರಕ್ಷಿತ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ನಂಜನಗೂಡು ತಾಲೂಕು ಮಳೆಯ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಗೆ ನಮ್ಮ ಯೋಜನೆ ಸಹಕಾರಿಯಾಗಲಿದೆ. ನಮ್ಮ ಪ್ರಯತ್ನಕ್ಕೆ ಸ್ಥಳೀಯರ ಸಹಕಾರ ಅಗತ್ಯ. ಇದರಿಂದ ಜೌಗು ಪ್ರದೇಶದ ಸಂರಕ್ಷಣೆ, , ತ್ಯಾಜ್ಯ ನೀರಿನ ನಿರ್ವಹಣೆ ಮತ್ತು ಸುಸ್ಥಿರ ಕೃಷಿಗೆ ವರದಾನವಾಗಲಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts