ಫ್ರಾನ್ಸ್ ಸೂಪರ್ ಮಾರ್ಕೆಟ್​ನಲ್ಲಿ ಬಂದೂಕುಧಾರಿಯ ಆಟಾಟೋಪ

ಪ್ಯಾರಿಸ್​: ನೈರುತ್ಯ ಫ್ರಾನ್ಸ್​ನ ಕಾರ್ಕಸ್ಸೊನೆ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ, ಸೂಪರ್​ ಮಾರ್ಕೆಟ್​ನಲ್ಲಿ ಅಡಗಿಕೊಂಡಿದ್ದಾನೆ.

ಇದಕ್ಕೂ ಮೊದಲು ಕಾರ್ಕಾಸ್​ಸೊನ್ನೆಯಿಂದ ಸ್ವಲ್ಪವೇ ದೂರದ ಟ್ರೆಬ್ಸ್​ ಎಂಬಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ಪೊಲೀಸ್​ ಸಿಬ್ಬಂದಿಯೊಬ್ಬರು ಗುಂಡಿನೇಟಿನಿಂದ ಗಾಯಗೊಂಡಿದ್ದಾರೆ. ಈ ಎರಡೂ ಘಟನೆಗಳಿಗೂ ಸಂಬಂಧವಿದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸ್​ ಕಾರ್ಯಾಚರಣೆ ಮುಂದುವರಿದೆ.

ಶುಕ್ರವಾರ ಬೆಳಗ್ಗೆ 11.15ರಲ್ಲಿ ಟ್ರೆಬ್ಸ್​ನ ಸೂಪರ್​ ಮಾರ್ಕೆಟ್​ ಪ್ರವೇಶಿಸಿದ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ ಎಂದು ಭದ್ರತಾ ಇಲಾಖೆಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಆಗಂತುಕನಿಗೆ ಇಸ್ಲಾಮಿಕ್ ಸ್ಟೇಟ್​ನ ಸಂಪರ್ಕವಿದೆ ಎನ್ನಲಾಗಿದೆ. ವ್ಯಕ್ತಿಗೆ ಸುಮಾರು 30 ವರ್ಷ ವಯಸ್ಸಾಗಿದ್ದು, ಸೂಪರ್​ ಮಾರ್ಕೆಟ್​ ಪ್ರವೇಶಿಸುವ ವೇಳೆ ಆತನ ಬಳಿ ಬಂದೂಕು, ಗ್ರೆನೇಡ್​ಗಳಿದ್ದವು. ಸಿರಿಯಾ ಘಟನೆಗೆ ಸೇಡು ತೀರಿಸಿಕೊಳ್ಳುತ್ತಿರುವುದಾಗಿ ಆತ ಹೇಳುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗಂತುಕ ಅಡಗಿರುವ ಸೂಪರ್​ ಮಾರ್ಕೆಟ್​ನಲ್ಲಿ ಕೆಲವರಿಗೆ ಗಾಯಗಳಾಗಿವೆ ಎನ್ನಲಾಗುತ್ತಿದ್ದು, ಅದು ಇನ್ನು ಖಚಿತವಾಗಿಲ್ಲ.
ಫ್ರಾನ್ಸ್​​ನ ಪ್ರಧಾನ ಮಂತ್ರಿ ಎಡ್ವರ್ಡ್​ ಫಿಲಿಪ್​ ಈ ಘಟನೆಯನ್ನು ” ಗಂಭೀರ ಸನ್ನಿವೇಶ” ಎಂದೇ ಕರೆದಿದ್ದಾರೆ. ಆಂತರಿಕ ಸಚಿವ ಗೆರಾರ್ಡ್ ಕೊಲ್ಲಂಬ್​ ಘಟನಾ ಸ್ಥಳ ಟ್ರೆಬ್ಸ್​ಗೆ ಧಾವಿಸುತ್ತಿರುವುದಾಗಿ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *