ಟೈರ್​ ಸ್ಫೋಟಿಸಿ ಲಾರಿಗೆ ಡಿಕ್ಕಿ ಹೊಡೆದ ಕಾರು: ಧಾರವಾಡದ ಬಳಿಯ ಅಪಘಾತದಲ್ಲಿ ಬಾಗಲಕೋಟೆಯ ಐವರ ಸಾವು

ಧಾರವಾಡ: ನವಲಗುಂದ ತಾಲೂಕಿನ ಅಮರಗೋಳ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ. ಕಾರಿನ ಟೈರು ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಲಾರಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.

ಬಾಗಲಕೊಟೆಯ ಕವಲಪೇಟ ನಿವಾಸಿಗಳಾದ ರವಿ ಹಂಡಿ (40), ಲೇಖಾಶ್ರೀ ಹಂಡಿ (18) ನವೀನಕುಮಾರ ಹಂಡಿ (14), ಶರಣ (7) ಮತ್ತು ವರ್ಷಾ ಜಿಗಜಣಿ (12) ಮೃತರು. ದಾವಣಗೆರೆಯಿಂದ ಬಾಗಲಕೋಟೆಗೆ ತೆರಳುವಾಗ ನವಲಗುಂದ-ನರಗುಂದ ಮಧ್ಯೆ ಈ ಅಪಘಾತ ಸಂಭವಿಸಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಅಪಘಾತ ಸಂಭವಿಸಿದ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದರು. ಆಸ್ಪತ್ರೆಗೆ ಸ್ಥಳಾಂತರಿಸಿದ ಬಳಿಕ ಇನ್ನಿಬ್ಬರು ಮೃತಪಟ್ಟರು ಎಂದು ಪೊಲೀಸ್​ ಮೂಲಗಳು ಹೇಳಿವೆ. ನವಲಗುಂದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *