Tuesday, 11th December 2018  

Vijayavani

Breaking News

ಕಲಬುರಗಿ: 8 ಕಾರುಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

Sunday, 14.01.2018, 10:16 AM       No Comments

ಕಲಬುರಗಿ: ನಗರದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮುಂದುವರಿದಿದೆ. ವಿವಿಧೆಡೆ ಕಾರುಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ್ದಾರೆ.

8ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ದುಷ್ಕರ್ಮಿಗಳ ಕಾಟಕ್ಕೆ ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.
ಸೇಡಂ ರಸ್ತೆಯ ಜಯನಗರದಲ್ಲಿ ಎರಡು, ಬನಶಂಕರಿ ಕಾಲನಿಯ ಒಂದು, ವಿಶ್ವೇಶ್ವರಯ್ಯ ಕಾಲನಿಯ ಒಂದು, ಯುನೈಟೆಡ್ ಆಸ್ಪತ್ರೆ ಬಳಿ ಒಂದು ಹಾಗೂ ಲಾಲಗೇರಿ ಕ್ರಾಸ್ ಬಳಿ ಒಂದು ಕಾರಿಗೆ ಬೆಂಕಿ ಹಚ್ಚಿದ್ದಾರೆ.

ಸ್ಥಳಗಳಿಗೆ ಕಲಬುರಗಿಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top