ಆಕಸ್ಮಿಕ ಬೆಂಕಿಯಿಂದ ಕಾರು ಭಸ್ಮ

ಹನೂರು: ಸಮೀಪದ ಅಜ್ಜೀಪುರ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ಇಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಭಸ್ಮವಾಗಿದೆ.

ಕಾರು ಚಾಲಕ ಸತೀಶ್, ಕಾರಿನಲ್ಲಿದ್ದ ಆನಂದ್‌ರಾಜ್, ಇಸ್ಮಾಯಿಲ್ ಹಾಗೂ ರಿತುಶೇಖ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡು ಮೂಲದ ಆನಂದ್‌ರಾಜ್ ಎಂಬವರಿಗೆ ಸೇರಿದ ಕಾರು ( ಟಿಎನ್ 02, ಎಡಬ್ಯೂ 4943) ತಮಿಳುನಾಡಿನಿಂದ ಕೊಳ್ಳೇಗಾಲದ ಕಡೆಗೆ ಬರುತಿತ್ತು. ಮಧ್ಯಾಹ್ನ 12.45ರಲ್ಲಿ ಅಜ್ಜೀಪುರದ ಬಳಿ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಸಂದರ್ಭದಲ್ಲಿ ಕಾರು ನಿಲ್ಲಿಸಿ ನಾಲ್ವರೂ ಹೊರ ಬಂದಿದ್ದಾರೆ. ಬೆಂಕಿ ಜ್ವಾಲೆ ಪೂರ್ಣ ವ್ಯಾಪಿಸಿಕೊಂಡಿದ್ದು ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಸುದ್ದಿ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ. ಈ ವೇಳೆಗಾಗಲೇ ಕಾರು ಸಂಪೂರ್ಣ ಭಸ್ಮವಾಗಿತ್ತು.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಶೇಷ, ಸಿಬ್ಬಂದಿಗಳಾದ ಪ್ರವೀಣ್, ನವೀನ್, ಮುನಿಶೆಟ್ಟಿ, ಗಿರೀಶ್, ಮಲ್ಲೇಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *