ಕಾರ್​-ಬೈಕ್​ ನಡುವೆ ಡಿಕ್ಕಿ: ತುಂಡಾಗಿ ಬಿದ್ದ ಬೈಕ್​ ಸವಾರನ ಕೈ

ಮಡಿಕೇರಿ: ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿಯಲ್ಲಿ ಬೈಕ್​ ಮತ್ತು ಕಾರ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್​ ಸವಾರನ ಕೈ ತುಂಡಾಗಿ ಬಿದ್ದಿರುವ ಘಟನೆ ನಡೆದಿದೆ.

ಬೈಕ್ ಸವಾರ ದಿನೇಶ್(24) ಸ್ಥಿತಿ ಗಂಭೀರವಾಗಿದ್ದು, ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ವೀರಾಜಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿಯಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಬೈಕ್ ಸವಾರ ತಮಿಳುನಾಡು ಮೂಲದವನು.

ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One Reply to “ಕಾರ್​-ಬೈಕ್​ ನಡುವೆ ಡಿಕ್ಕಿ: ತುಂಡಾಗಿ ಬಿದ್ದ ಬೈಕ್​ ಸವಾರನ ಕೈ”

  1. ಈಗಿನ ಯುವಕರ ಬೈಕ್ ಕ್ರೇಸೇ ಹಾಗಿದೆ. ಹುಚ್ಚಾಪಟ್ಟೆ ವೇಗವಾಗಿ ಗಾಡಿಯನ್ನೂ ಓಡಿಸುತ್ತಾರೆ, ತಲೆಗೆ ಹೆಲ್ಮೆಟ್ಟ್ ಕೂಡ ಹಾಕಿಕೊಳ್ಳೋದಿಲ್ಲ. ಇಂತಹವರಿಗೆ ಅಯ್ಯೋ ಪಾಪ ಅಂತ ಕೂಡ ಅನ್ನಬಾರದು. ರಸ್ತೆ ನಿಯಮಾನ ಗಾಳಿಗೆ ತೂರಿದವರಿಗೆ ಹೀಗೇ ಆಗಬೇಕು.

Comments are closed.