ಬೈಂದೂರಿನಲ್ಲಿ ಕಾಡು ಹಂದಿಗೆ ಡಿಕ್ಕಿ ಹೊಡೆದು, ಮರಕ್ಕೆ ಅಪ್ಪಳಿಸಿದ ಕಾರು, ಚಾಲಕನ ಸಾವು

ಉಡುಪಿ: ಜಿಲ್ಲೆಯ ಬೈಂದೂರಿನ ಅರೆಶಿರೂರು ಮತ್ತು ಕಾಲ್ತೋಡು ರಸ್ತೆಯಲ್ಲಿ ಕಾಡು ಹಂದಿಗೆ ಕಾರು ಡಿಕ್ಕಿ ಹೊಡದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಕಾಡು ಹಂದಿ ಕೂಡ ಸತ್ತಿದೆ.

ಚಂದ್ರಶೇಖರ ಶೆಟ್ಟಿ (48) ಮೃತ. ಶನಿವಾರ ತಡರಾತ್ರಿ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರಿಗೆ ಹಠಾತ್ತನೆ ಅಡ್ಡ ಬಂದ ಹಂದಿಗೆ ಕಾರು ಡಿಕ್ಕಿಯಾಗಿದೆ. ಬಳಿಕ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಚಂದ್ರಶೇಖರ ಶೆಟ್ಟಿ ಮರಕ್ಕೆ ಡಿಕ್ಕಿ ಹೊಡೆಡಿದ್ದಾರೆ.

ನಂತರ ಕಾರು ಚರಂಡಿಗೆ ಉರುಳಿದೆ. ಇದರ ಪರಿಣಾಮ ಚಂದ್ರಶೇಖರ ಶೆಟ್ಟಿ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬೈಂದೂರು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *