ಬೆಂಗಳೂರು: ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮದ ಮದ್ದೂರಮ್ಮದೇವಿ ಜಾತ್ರಾ ಉತ್ಸವದಲ್ಲಿ ತೇರು ಬಿದ್ದು ಇಬ್ಬರು ಸಾವನ್ನಪ್ಪಿದ ಸಂಬಂಧ ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜತೆಗೆ, ಪೊಲೀಸರ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಶಿಾರಸು ಮಾಡಿದ್ದಾರೆ.
ಆನೇಕಲ್ ತಾಲೂಕಿನ ಹುಸ್ಕೂರು ವೃತ್ತದ ಸರ್ಜಾಪುರ ಹೋಬಳಿ ರಾಜಸ್ವ ನಿರೀಕ್ಷಕ (ಆರ್‌ಎ) ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ (ವಿಎ) ಡಿ. ಕಾರ್ತಿಕ್ ಎಂಬುವರನ್ನು ಗುರುವಾರ ಆಮಾನತು ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.
ಮಾ. 18ರಂದು ತಹಸೀಲ್ದಾರ್, ತಾಲೂಕು ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆಯ ಅಧ್ಯಕ್ಷತೆಯಲ್ಲಿ ಶ್ರೀ ಮದ್ದೂರಮ್ಮ ಜಾತ್ರೆ ಮತ್ತು ತೇರು ಎಳೆಯುವ ಸಂಬಂಧ ಸಭೆ ನಡೆದಿತ್ತು. ದೇವಾಲಯದ ಆಡಳಿತ ಮಂಡಳಿಗೆ ಸಭಾ ನಡಾವಳಿಯಲ್ಲಿ ತೇರು/ ಕುರ್ಜನು 80 ಅಡಿಗೆ ಮೀರದಂತೆ ಕಟ್ಟಲು ಷರತ್ತು ವಿಧಿಸಲಾಗಿತ್ತು. ಆದರೂ, ಷರತ್ತು ಉಲ್ಲಂಸಿ 110-120 ಅಡಿ ಎತ್ತರದ ತೇರು ಕಟ್ಟಲಾಗಿತ್ತು.
ಮಾ. 22ರಂದು ರಾಯಸಂದ್ರ ಗ್ರಾಮದಲ್ಲಿ ತೇರು ಸಾಗುವಾಗ ವಾಲಿ ಬಿದ್ದ ಪರಿಣಾಮ ವಿದ್ಯಾರ್ಥಿನಿ ಜ್ಯೋತಿ ಮತ್ತು ಸ್‌ಟಾವೇರ್ ಕಂಪನಿ ನೌಕರ ಲೋಹಿತ್ ಎಂಬುವರು ಅಸುನೀಗಿದ್ದರು. 8 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದರೂ ದುರ್ಘಟನೆ ತಡೆಯಲು ವಿಲರಾಗಿದ್ದಾರೆ. ರಾಜಸ್ವ ನಿರೀಕ್ಷಕ ಮತ್ತು ಗ್ರಾಮ ಆಡಳಿತಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಡಿಸಿ ಜಿ. ಜಗದೀಶ್ ತಿಳಿಸಿದ್ದಾರೆ.
ಖಾಕಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಾರಸು
ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಹೆಬ್ಬಗೋಡಿ ಠಾಣೆ ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆ ಶಿಸ್ತುಕ್ರಮವನ್ನು ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿಸಿ ಜಗದೀಶ್ ಶಿಾರಸು ಮಾಡಿದ್ದಾರೆ. ಅಲ್ಲದೆ, ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ಮತ್ತು ಕೇಂದ್ರ ವಲಯ ಮಹಾ ನಿರೀಕ್ಷಕ ಲಾಬೂರಾಮ್‌ಗೂ ಪತ್ರ ಬರೆದಿದ್ದಾರೆ.