ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು, ಚಾಲಕನಿಗೆ ಗಂಭೀರ ಗಾಯ

ಬೆಳಗಾವಿ: ಇಲ್ಲಿನ ಎಂ.ಕೆ. ಹುಬ್ಬಳ್ಳಿಯ ಹೊಳಿಹೊಸೂರು ರಸ್ತೆಯಲ್ಲಿರುವ ರಾಜು ಶಿಂತ್ರಿ ಎಂಬವರ ಮನೆಗೆ ಶುಕ್ರವಾರ ತಡರಾತ್ರಿ ಕಾರು ನುಗ್ಗಿದೆ. ಅತಿವೇಗವಾಗಿ ಚಲಿಸುತ್ತಿದ್ದ ಕಾರಿನ ಮೇಲೆ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಕಾರು ಮುಖ್ಯರಸ್ತೆಯ ಬದಿಯಲ್ಲಿದ್ದ ಮನೆಗೆ ಕಾರು ನುಗ್ಗಿತು ಎನ್ನಲಾಗಿದೆ.

ಕಾರು ಚಾಲಕ ಮಂಜುನಾಥ್​ ಮಡಿವಾಳಪ್ಪ ಮೆಳವಂಕಿ (34) ಎಂಬುವರ ಕೈಗೆ ಗಂಭೀರ ಗಾಯವಾಗಿದೆ. ನೇಗಿನಹಾಳದಿಂದ ಎಂ.ಕೆ. ಹುಬ್ಬಳ್ಳಿಗೆ ಬರುತ್ತಿದ್ದಾಗ ಮಂಜುನಾಥ್​ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡರು ಎನ್ನಲಾಗಿದೆ.

ಮನೆಯ ಮುಂಭಾಗದಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ, ಮನೆ ಮುಂದೆ ನಿಲ್ಲಿಸಲಾಗಿದ್ದ ಚಕ್ಕಡಿ ಮತ್ತಿತರ ಕೃಷಿ ಉಪಕರಣಗಳಲ್ಲದೆ ಮನೆಯ ಮುಂಭಾಗದ ಮೇಲ್ಛಾವಣಿಗೆ ಭಾರಿ ಹಾನಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *