ಸುಳ್ಯ: ಹಾಸನದ ಜಾವಕ್ಕಲ್ ಧಾರ್ಮಿಕ ಕೇಂದ್ರಕ್ಕೆ ತೆರಳಿ ಕಣ್ಣೂರಿಗೆ ಹಿಂತಿರುಗುತ್ತಿದ್ದ ವೇಳೆ ಸುಳ್ಯದ ಗುರುಂಪು ಬಳಿ ಕಾರು ಪಲ್ಟಿಯಾಗಿದ್ದು, ಚಾಲಕ ಸಹಿತ ಅದರಲ್ಲಿದ್ದ5 ಮಂದಿ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಐದು ಮಂದಿ ಕೇರಳದ ಕಣ್ಣೂರು ಮೂಲದವರಾಗಿದ್ದು ಹಮೀದ್, ಬಶೀರ್, ರಹೀಸ್, ಹುಸೇನ್ ಮತ್ತು ಶಿಹಾಬ್ ಎಂಬುದಾಗಿ ತಿಳಿದು ಬಂದಿದೆ. ಗಾಯಳುಗಳನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದರು. ಕಾರು ಬಿದ್ದ ಪರಿಣಾಮವಾಗಿ ಮುನೀರ್ ಎಂಬುವವರ ಮನೆಯ ಗೋಡೆಗೆ ಹಾನಿಯಾಗಿದೆ.
ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ, ಭಾವನಾತ್ಮಕ ಬುದ್ಧಿಮತ್ತೆ: ಡಾ.ಎಂ.ಎಸ್.ಮೂಡಿತ್ತಾಯ ಆಶಯ