ನಾಯಕ ವಿರಾಟ್​​ ಕೊಹ್ಲಿಯ ಶತಕ : ಕೆಕೆಆರ್​ಗೆ ಬೃಹತ್​​ ಮೊತ್ತದ ಗುರಿ ನೀಡಿದ ಆರ್​ಸಿಬಿ

ಕೋಲ್ಕತ: ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಸಕ್ತ ಸಾಲಿನ ಐಪಿಎಲ್​​​ನ 35ನೇ ಪಂದ್ಯದಲ್ಲಿ ಕೋಲ್ಕತಾ ನೈಡ್​​ ರೈಡರ್ಸ್​ಗೆ ಸ್ಪರ್ಧಾತ್ಮಕ ಗುರಿ ನೀಡುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದೆ. ತಂಡ 20 ಓವರ್​​ಗಳಲ್ಲಿ 4 ವಿಕೆಟ್​​ ನಷ್ಟಕ್ಕೆ 213 ರನ್​​​ ಕಲೆಹಾಕಿತು.


ಇಲ್ಲಿನ ಈಡೆನ್​​ ಗಾರ್ಡನ್ಸ್​​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​​ ಸೋತು ಬ್ಯಾಟಿಂಗ್​​ ಮಾಡಿದ ​ ಕೊಹ್ಲಿ ಪಡೆ ಆರಂಭದಲ್ಲಿ ವಿಕೆಟ್​​ ಕಳೆದುಕೊಂಡು ನೀರಸ ಪ್ರದರ್ಶನ ತೋರಿದ ತಂಡಕ್ಕೆ ನಾಯಕ ವಿರಾಟ್​​​ ಕೊಹ್ಲಿ ಹಾಗೂ ಮೊಯಿನ್​​​ ಅಲಿ ಅವರ ಅದ್ಭುತ ಪ್ರದರ್ಶನದಿಂದ ತಂಡ 200ರ ಗಡಿದಾಟಿತು.


ಆರಂಭಿಕರಾಗಿ ಕ್ರೀಸ್​​ಗೆ ಆಗಮಿಸಿದ ವಿಕೆಟ್​​ ಕೀಪರ್​​​ ಪಾರ್ಥಿವ್​​ ಪಟೇಲ್​​​​​​​​(11) ಎರಡು ಬೌಂಡರಿಗಳನ್ನು ಬಾರಿಸಿ ಶೀಘ್ರ ಔಟಾಗಿ ಪೆವಿಲಿಯನ್​​ ಸೇರಿದರು. ಬಳಿಕ ಬಂದ ಆಕಾಶ್​​ದೀಪ್​​​ ನಾಥ್​(13) ರಸೇಲ್​​​​​​​​​​ ಎಸೆತದಲ್ಲಿ ರಾಬಿನ್​​ ಉತ್ತಪ್ಪಕ್ಕೆ ಕ್ಯಾಚಿತ್ತು ಪೆವಿಲಿಯನ್​​ನತ್ತ ನಡೆದರು.


ಕೊಹ್ಲಿ-ಮೊಯಿನ್​​​ ಜುಗಲ್​​ಬಂದಿ:
ನಾಯಕ ವಿರಾಟ್​​​ ಕೊಹ್ಲಿ ಮತ್ತು ಮೊಯಿನ್​​​​ ಅಲಿ ಅವರ ಅದ್ಭುತ ಪ್ರದರ್ಶನವು ತಂಡಕ್ಕೆ ಹೆಚ್ಚಿನ ಮೊತ್ತ ನೀಡಿತು. ಆರಂಭಿಕರಾಗಿ ಕ್ರೀಸ್​​ಗೆ ಆಗಮಿಸಿದ ನಾಯಕ ವಿರಾಟ್​​ ಕೊಹ್ಲಿ ಭರ್ಜರಿ ಪ್ರದರ್ಶನ ತೋರುವ ಪ್ರಸಕ್ತ ಆವೃತ್ತಿಯಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು. ಅವರು ಎದುರಿಸಿದ 58 ಎಸೆತಗಳಲ್ಲಿ 4 ಸಿಕ್ಸರ್​​​ ಹಾಗೂ 9 ಬೌಂಡರಿಗಳೊಂದಿಗೆ 100 ರನ್​​​ ತಂಡಕ್ಕೆ ನೀಡಿದರು. ಆದರೆ ಕೊನೆಯ ಎಸೆತಲ್ಲಿ ಸಿಕ್ಸ್​​ ಬಾರಿಸಲು ಹೋಗಿ ಗಿರ್ನಿ ಎಸೆತದಲ್ಲಿ ಶುಭ್​​ಮನ್​​ಗೆ ಕ್ಯಾಚ್​​ ನೀಡಿದರು.


ಇಂಗ್ಲೆಂಡ್​​ನ ಆಲ್​​ರೌಂಡರ್​​​ ಮೊಯಿನ್​​ ಅಲಿ ಎದುರಿಸಿದ ಕೇವಲ 28 ಎಸೆತಗಳಲ್ಲಿ 6 ಸಿಕ್ಸರ್​​ ಹಾಗೂ 5 ಬೌಂಡರಿಗಳನ್ನು ಬಾರಿಸುವ ಮೂಲಕ 66 ರನ್​​​ ಗಳಿಸುವ ಮೂಲಕ ಐಪಿಎಲ್​​ನಲ್ಲಿ ಎರಡನೇ ಅರ್ಧ ಶತಕ ದಾಖಲಿಸಿದರು. ಈ ವೇಳೆ ಕುಲ್​​ದೀಪ್​​​ ಯಾದವ್​​​​​ ಎಸೆತದಲ್ಲಿ ಪ್ರಸಿದ್ಧ್​​ ಕೃಷ್ಣಗೆ ಕ್ಯಾಚಿತ್ತರು. ಬಳಿಕ ಬಂದ ಮಾರ್ಕಸ್​​​​ ಸ್ಟೋನಿಸ್​​​​​​​ 8 ಎಸೆತಗಳಲ್ಲಿ ಒಂದು ಸಿಕ್ಸ್​​ ಹಾಗೂ ಎರಡು ಬೌಂಡರಿಗಳನ್ನು ಬಾರಿಸಿ 17 ರನ್​ನೊಂದಿಗೆ ಅಜೇಯರಾಗಿ ಉಳಿದರು. (ಏಜನ್ಸೀಸ್​​)

Leave a Reply

Your email address will not be published. Required fields are marked *