ಕ್ಯಾಂಟರ್​ನಲಿದ್ದ 23 ಗೋವುಗಳ ರಕ್ಷಣೆ

ಬಣಕಲ್: ಕಳಸದಿಂದ ಚಿಕ್ಕಬಳ್ಳಾಪುರಕ್ಕೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಮೂವರನ್ನು ಬುಧವಾರ ಬಾಳೂರು ಪೋಲಿಸರು ಬಂಧಿಸಿ ಗೋವುಗಳನ್ನು ರಕ್ಷಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ಮಲ್ಲಪ್ಪನಹಳ್ಳಿಯ ವೆಂಕಟೇಶ್, ಭಾರ್ಗವ, ನರಸಿಂಹಮೂರ್ತಿ ಬಂಧಿತರು. ಕ್ಯಾಂಟರ್ ವಾಹನದಲ್ಲಿದ್ದ 23 ಗೋವುಗಳನ್ನು ರಕ್ಷಿಸಲಾಗಿದ್ದು, ಇಕ್ಕಟ್ಟಿನಲ್ಲಿ ಗೋವುಗಳನ್ನು ತುಂಬಿಸಿದ್ದರಿಂದ ಕೆಲ ಗೋವುಗಳು ಗಾಯಗೊಂಡಿವೆ. ವಾಹನದಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದೆ. ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಬೇರೆ ಬೇರೆ ವಾಹನ ಸಂಖ್ಯೆಗಳಿವೆ. ಇದರ ಹಿಂದೆ ಗೋಸಾಗಣೆ ದೊಡ್ಡ ಜಾಲ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *