ಗುಂಟೂರು ಚಿಲ್ಲಿ ವಿಷಕಾರಿ!

ವಿಜಯವಾಡ: ವಿಶ್ವಪ್ರಸಿದ್ಧ ಗುಂಟೂರು ಮೆಣಸಿನಕಾಯಿ ಮಾದರಿಯಲ್ಲಿ ಕ್ಯಾನ್ಸರ್ ತರಬಲ್ಲ ವಿಷಕಾರಿ ಎಫ್ಲಾಟಾಕ್ಸಿನ್​ಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವುದಾಗಿ ವರದಿ ಆಗಿದೆ. ರುಚಿ, ಘಾಟಿನಲ್ಲಿ ಹೆಸರು ಮಾಡಿರುವ ಗುಂಟೂರು ಮೆಣಸಿನಕಾಯಿಯ ಅವೈಜ್ಞಾನಿಕ ನಿರ್ವಹಣೆ ಯಿಂದಾಗಿ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.

ಕೆಲವು ಸೂಕ್ಷ್ಮಾಣುಜೀವಿಗಳಿಂದ ಉತ್ಪಾದನೆಗೊಳ್ಳುವ ವಿಷಕಾರಿ ವಸ್ತು ‘ಅಫ್ಲಾಟಾಕ್ಸಿನ್ಸ್’ನ ಕುರುಹುಗಳು ಗುಂಟೂರು ನಗರದಿಂದ ಸಂಗ್ರಹಿಸಲಾದ ಮೆಣಸಿನಕಾಯಿ ಮಾದರಿಯಲ್ಲಿ ಪತ್ತೆಯಾಗಿದೆ ಎಂದು ಏಷ್ಯನ್ ಜರ್ನಲ್ ಆಫ್ ಫಾರ್ವಸಿಟಿಕ್ಸ್​ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಹೇಳಿದೆ.

ಮೆಣಸಿನಕಾಯಿಗಳನ್ನು ನೆಲದಲ್ಲಿ ಹರಡಿರುವಾಗ, ಸಾಗಾಟ ಅಥವಾ ಸಂಗ್ರಹಣಾ ವ್ಯವಸ್ಥೆಯಲ್ಲಿ ಕೂಡ ಲೋಪದೋಷಗಳು ಕಂಡುಬಂದು ಅಫ್ಲಾಟಾಕ್ಸಿನ್ ಉತ್ಪತ್ತಿಯಾಗಿರಬಹುದು. ಹಾಗಾಗಿ ವೈಜ್ಞಾನಿಕ ಮಾದರಿಯಲ್ಲಿ ಮೆಣಸಿನಕಾಯಿಗಳ ಸಂಗ್ರಹಣೆ ಅವಶ್ಯವಾಗಿದೆ ಎಂದು ವರದಿ ಹೇಳಿದೆ. ಮಚಲಿಪಟ್ಟಣಂನಲ್ಲಿನ ಕೃಷ್ಣ ವಿಶ್ವವಿದ್ಯಾಲಯದ ಸಂಶೋಧಕರು, ಅಧ್ಯಯನಕ್ಕಾಗಿ ವಿಜಯವಾಡ ನಗರದ ಅಂಗಡಿಗಳು, ಮನೆಗಳು, ಸೂಪರ್​ವಾರ್ಕೆಟ್, ಗುಂಟೂರಿನ ಮಾರುಕಟ್ಟೆಗಳಿಂದ ಮೆಣಸಿನಕಾಯಿಗಳನ್ನು ಸಂಗ್ರಹಿಸಿದ್ದಾರೆ. ಏಳು ಮಾದರಿ ಪೈಕಿ ಐದರಲ್ಲಿ ಅಫ್ಲಾಟಾಕ್ಸಿನ್ ಜಿ1,ಜಿ2, ಬಿ2 ಅಂಶ ಪತ್ತೆಯಾಗಿದೆ. ಮಕ್ಕಳ ಮೇಲೆ ಪರಿಣಾಮ: ವಿಷಕಾರಿ ಅಂಶಗಳನ್ನು ನಿರಂತರವಾಗಿ ಊಟದಲ್ಲಿ ಸೇವಿಸುತ್ತಿದ್ದರೆ ಮಕ್ಕಳ ಆರೋಗ್ಯ ಶೀಘ್ರ ಹದಗೆಡುತ್ತದೆ. ದೊಡ್ಡವರಲ್ಲಿ ಕರುಳಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *