ಕ್ಯಾನ್ಸರ್​ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ನಟಿ ಸೊನಾಲಿ ಬೇಂದ್ರೆ

ಮುಂಬೈ: ನ್ಯೂಯಾರ್ಕ್​ನಲ್ಲಿ ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್​ ನಟಿ ಸೊನಾಲಿ ಬೇಂದ್ರೆ ಸೋಮವಾರ ಬೆಳಗ್ಗೆ ಭಾರತಕ್ಕೆ ವಾಪಸಾಗಿದ್ದಾರೆ.

ಮುಂಜಾನೆ ಮುಂಬೈ ಏರ್​ಪೋರ್ಟ್​ಗೆ ಆಗಮಿಸಿದ ಸೊನಾಲಿ ಬೇಂದ್ರೆಯವರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೊನಾಲಿ ತಮ್ಮ ಪತಿ ಗೋಲ್ಡಿ ಬೆಹ್ಲ್​ ಜತೆಗೆ ನ್ಯೂಯಾರ್ಕ್​ನಿಂದ ಆಗಮಿಸಿದ್ದಾರೆ. ಕಿಮೋಥೆರಪಿ ಚಿಕಿತ್ಸೆಯಿಂದಾಗಿ ಸೋನಾಲಿ ತಮ್ಮ ತಲೆಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.

ಸೊನಾಲಿ ಬೇಂದ್ರೆಯವರ ಚಿಕಿತ್ಸೆ ಸದ್ಯಕ್ಕೆ ಮುಗಿದಿದೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಆದರೆ, ಮತ್ತೆ ರೋಗ ಮರುಕಳಿಸದಂತೆ ಕಾಳಜಿವಹಿಸಬೇಕು ಎಂದು ಅವರ ಪತಿ ಗೋಲ್ಡಿ ತಿಳಿಸಿದ್ದಾರೆ.

ಕ್ಯಾನ್ಸರ್​ ಚಿಕಿತ್ಸೆ ಮುಗಿದಿದ್ದು, ಆರೋಗ್ಯದಲ್ಲಿ ಸುಧಾರಣೆಯಾಗಿದೆ. ನಾನು ಭಾರತಕ್ಕೆ ವಾಪಸಾಗುತ್ತಿದ್ದೇನೆ ಎಂದು ಸೊನಾಲಿ ಬೇಂದ್ರೆ ನಿನ್ನೆ ಇನ್ಸ್​ಟಾಗ್ರಾಂನಲ್ಲಿ ಬರೆದಿದ್ದರು. ಈ ವರ್ಷದ ಜುಲೈನಲ್ಲಿ ತಮಗಿರುವ ರೋಗದ ಬಗ್ಗೆ ಸೊನಾಲಿ ಹೇಳಿಕೊಂಡಿದ್ದರು.

ಸೊನಾಲಿ ತಮ್ಮ ಕ್ಯಾನ್ಸರ್​ನೊಂದಿಗಿನ ಹೋರಾಟದ ಬಗ್ಗೆ ಕೆಲವು ವಿವರಣೆಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಕೈ ಬೆರಳನ್ನೂ ಎತ್ತುವ ಶಕ್ತಿಯೂ ನನಗೆ ಇರಲಿಲ್ಲ. ಆದರೂ ಹೋರಾಟ ನಿಲ್ಲಿಸಲಾರೆ ಎಂದು ಹೇಳಿದ್ದರು. ಚಿಕಿತ್ಸೆ ಪಡೆಯುತ್ತಿರುವಾಗಿನ ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದರು. ಅವರು ನ್ಯೂಯಾರ್ಕ್​ನಲ್ಲಿದ್ದಾಗ ಹಲವು ಸ್ನೇಹಿತರು ಭೇಟಿಯಾಗಿ, ಧೈರ್ಯ ತುಂಬಿದ್ದರು.

View this post on Instagram

#sonalibendre welcome back 🙏🙏👍

A post shared by Viral Bhayani (@viralbhayani) on

 

 

View this post on Instagram

Welcome back home 🙏 #sonalibendre

A post shared by Viral Bhayani (@viralbhayani) on