ಇಂಗ್ಲೆಂಡ್: ಮುಂಬರುವ ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ(ICC Champions Trophy) ಇಂಗ್ಲೆಂಡ್ ಮೇಲೆ ನಡೆಯುವ ಅಪಘಾನಿಸ್ತಾನದ ಪಂದ್ಯಗಳನ್ನು ರದ್ದು ಮಾಡಬೇಕು ಎಂದು ಯುಕೆ ರಾಜಕಾರಣಿಗಳು ಕ್ರಿಕೆಟ್ ಮಂಡಳಿಗೆ(ECB) ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ ಬಿಡುಗಡೆಗೆ ಆದೇಶಿಸಿದ ಹೈಕೋರ್ಟ್: ಮಾಜಿ ಸಂಸದ ಡಿ ಕೆ ಸುರೇಶ್ ವಂಚನೆ ಪ್ರಕರಣ
ಅಪಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ನೀಡದಂತೆ ದೌರ್ಜನ್ಯ ಮಾಡುತ್ತಿದೆ ಎಂದು ಖಂಡಿಸಿದ ರಾಜಕಾರಣಿಗಳು ಅಲ್ಲಿನ ದೌರ್ಜನ್ಯದ ವಿರುದ್ಧ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಇದೇ ನಿಲುವು ತಗೆದುಕೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
160ಕ್ಕೂ ಹೆಚ್ಚು ಸಂಸದರು ಸಹಿ ಮಾಡಿದ ಪತ್ರದಲ್ಲಿ ಇಂಗ್ಲೆಂಡ್‌ನ ಆಟಗಾರರು ಮತ್ತು ಅಧಿಕಾರಿಗಳು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರನ್ನು ನಡೆಸಿಕೊಳ್ಳುವುದರ ವಿರುದ್ಧ ಮಾತನಾಡುವಂತೆ ಆಗ್ರಹಿಸಿದ್ದಾರೆ.
2025ರ ಫೆಬ್ರವರಿ 26 ರಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗ್ರೂಪ್ ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಪಂದ್ಯವನ್ನು ಬಹಿಷ್ಕರಿಸುವಂತೆ ನಾವು ಇಸಿಬಿಗೆ ಒತ್ತಾಯಿಸುತ್ತೇವೆ, ಇಂತಹ ವಿಡಂಬನಾತ್ಮಕ ನಿಂದನೆಗಳನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂಕೇತವನ್ನು ಕಳುಹಿಸಲು ಪತ್ರದಲ್ಲಿ ಸೇರಿಸಲಾಗಿದೆ ಎಂದು ಸಂಸದರ ಪ್ರತಿನಿಧಿಯಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಯೋಗ ನೃತ್ಯದಲ್ಲಿ ಆರೋಗ್ಯ ಜಾಗೃತಿ : ನಿಬ್ಬೆರಗಾಗಿಸಿದ ಗೌರಿತಾ ಕೆ.ಜಿ ಕಾರ್ಯಕ್ರಮ
2021ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ಅಪಘಾನಿಸ್ತಾನದಲ್ಲಿ ತಾಲಿಬಾನ್, ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ನಿರ್ಬಂಧಿಸಿದೆ, ಶಿಕ್ಷಣ ಮತ್ತು ಕೆಲಸಕ್ಕೆ ಅವರ ಪ್ರವೇಶವನ್ನು ನಿರ್ಬಂಧಿಸುತ್ತದೆ, ಅವರ ಚಲನೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತದೆ ಮತ್ತು ಅವರ ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳುವಂತೆ ಒತ್ತಾಯಿ ಅವರ ಮೇಲೆ ನಿರಂತರ ದಬ್ಬಾಳಿಕೆ ದೌರ್ಜನ್ಯ ಎಸಗುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)
2026ರ ಪಿಫಾ ವಿಶ್ವಕಪ್ ನನ್ನ ಕೊನೆಯದು: ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ಹೇಳಿಕೆ | Neymar