ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಗುಂಪುಗಳಿಗಾಗಿ (ಎಸ್ ಎಚ್ ಜಿ) ಮೆಗಾ ಜಾಗೃತಿ ಮತ್ತು ಕ್ರೆಡಿಟ್ ಲಿಂಕ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ಆದ್ಯತಾ ಸಾಲ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಮಮತಾ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸ್ವ ಸಹಾಯ ಯೋಜನೆ ಮೂಲಕ ಎಲ್ಲ ಮಹಿಳಾ ಗುಂಪಿನ ಉನ್ನತಿಗೆ ಬ್ಯಾಂಕ್ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಕೆನರಾ ಬ್ಯಾಂಕ್ ಹುಬ್ಬಳ್ಳಿ ವೃತ್ತ ಕಚೇರಿ ಪ್ರಧಾನ ವ್ಯವಸ್ಥಾಪಕ ಎಂ. ವಿಜಯಕುಮಾರ ಮಾತನಾಡಿ, ಸ್ವ ಸಹಾಯ ಸಂಗಳಿಗೆ ಲಭ್ಯವಿರುವ ಸಾಲದ ಬಗ್ಗೆ ವಿವರಣೆ ನೀಡಿದರು. ಎಲ್ಲ ಸಂದವರು ಪ್ರಯೋಜನ ಪಡೆಯಬೇಕೆಂದು ಹೇಳಿದರು.
14 ಸಂಘಗಳಿಗೆ ಒಟ್ಟು 1 ಕೋಟಿ ಸಾಲದ ಪತ್ರ ವಿತರಿಸಲಾಯಿತು.
ಸಹಾಯಕ ಪ್ರಧಾನ ವ್ಯವಸ್ಥಾಪಕ ರಂಜಿತಕುಮಾರ ಜೇನಾ, ಬ್ಯಾಹಟ್ಟಿ ಶಾಖೆಯ ಗ್ರಾಹಕರಾದ ಎಂ.ಎಸ್. ದ್ಯಾವನಗೌಡ್ರ, ನಿಂಗಪ್ಪ ಹಂಗರಕಿ ಇತರರು ಭಾಗವಹಿಸಿದ್ದರು.
ಹುಬ್ಬಳ್ಳಿ ಕ್ಷೇತ್ರಿಯ ಮುಖ್ಯಸ್ಥ ಸಜಲ ಸಮೀರ ಸ್ವಾಗತಿಸಿದರು.